ನವದೆಹಲಿ:ಅಭೂತಪೂರ್ವ ಗೆಲುವಿನೊಂದಿಗೆ ಎರಡನೇ ಬಾರಿಗೆ ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿ ಸರ್ಕಾರಕ್ಕೆ ಇಂದು ಶತದಿನದ ಸಂಭ್ರಮ. ಆದರೆ ಸೆಂಚುರಿ ಗಡಿಯಲ್ಲಿ ಆರ್ಥಿಕತೆ ಹಳ್ಳ ಹಿಡಿದಿರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
2014ರ ಚುನಾವಣೆಗಿಂತಲೂ ದೊಡ್ಡಮಟ್ಟದಲ್ಲಿ 2019ರ ಎಲೆಕ್ಷನ್ನಲ್ಲಿ ಮೋದಿ ಪರಾಕ್ರಮ ಮೆರೆದಿದ್ದರು. ಪರಿಣಾಮ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನವೂ ಇಲ್ಲದಂತಾಗಿತ್ತು. ನೂರು ದಿನದ ಸಂದರ್ಭದಲ್ಲಿ ಮೋದಿ ಸರ್ಕಾರದ ಬಹುಮುಖ್ಯ ನಡೆಗಳ ಬಗೆಗಿನ ಒಂದು ನೋಟ ಇಲ್ಲಿದೆ.
ಅಚ್ಚೇ ದಿನಗಳನ್ನು ಹೊತ್ತು ತಂದ ಮೋದಿ 2.0 ಸರ್ಕಾರಕ್ಕೆ 100 ದಿನ: ಎತ್ತ ಸಾಗುತ್ತಿದೆ 'ಅರ್ಥ'ವ್ಯವಸ್ಥೆ?
ತ್ರಿವಳಿ ತಲಾಖ್ ರದ್ದು:
ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಎರಡನೇ ಅವಧಿಯಲ್ಲಿ ಮೋದಿ ತ್ರಿವಳಿ ತಲಾಖ್ ರದ್ದುಗೊಳಿಸಿದ್ದರು. ಇದು ಮೋದಿ ಸರ್ಕಾರದ ನೂರು ದಿನ ಪ್ರಮುಖ ಸಾಧನೆ ಎಂದೇ ಪರಿಗಣಿಸಲಾಗಿದೆ.
370ನೇ ವಿಧಿ ರದ್ದು:
ಮೋದಿ ಸರ್ಕಾರದ ದೃಢ ನಿರ್ಧಾರದಲ್ಲಿ ಕಾಶ್ಮೀರಿಗರಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿತ್ತು. ಜಮ್ಮು ಕಾಶ್ಮೀರದಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಿ, ನಿಷೇಧಾಜ್ಞೆಯನ್ನು ಜಾರಿಗೊಳಿಸಿ ವಿಶೇಷ ಸ್ಥಾನಮಾನವನ್ನು ಹಿಂಪಡೆದಿತ್ತು. ವಿಧಿ ರದ್ದು ಹಾಗೂ ನಂತರದಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕಾಪಾಡುವಲ್ಲಿ ಮೋದಿ ಸರ್ಕಾರದ ನಡೆ ಪ್ರಶಂಸನೀಯ..!