ಮುಂಬೈ:ಇಲ್ಲಿನ ದಾದರ್ನ ಪಶ್ಚಿಮ ಭವಾನಿ ಶಂಕರ ರಸ್ತೆಯಲ್ಲಿನ ಪೊಲೀಸ್ ಕ್ವಾರ್ಟ್ಸ್ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 10 ವರ್ಷದ ಬಾಲಕಿವೋರ್ವಳು ಮೃತಪಟ್ಟಿದ್ದಾಳೆ.
ಪೊಲೀಸ್ ಕ್ವಾರ್ಟಸ್ನಲ್ಲಿ ಸಿಲಿಂಡರ್ ಸ್ಫೋಟ, ಬಾಲಕಿ ಬಲಿ: ಹೊತ್ತಿ ಉರಿದ ಮನೆಗಳು - undefined
ಮುಂಬೈನ ದಾದರ್ನಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಬಾಲಕಿವೋರ್ವಳು ಅಸುನೀಗಿದ್ದಾಳೆ. ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ ಮೂರು ಮನೆಗಳಿಗೆ ಆವರಿಸಿದೆ.
![ಪೊಲೀಸ್ ಕ್ವಾರ್ಟಸ್ನಲ್ಲಿ ಸಿಲಿಂಡರ್ ಸ್ಫೋಟ, ಬಾಲಕಿ ಬಲಿ: ಹೊತ್ತಿ ಉರಿದ ಮನೆಗಳು](https://etvbharatimages.akamaized.net/etvbharat/prod-images/768-512-3260974-thumbnail-3x2-fire.jpg)
ಬಾಲಕಿ
ಶ್ರಾವತಿ ಚವಾಣ್ ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ಸಿಲಿಂಡರ್ ಸ್ಫೋಟವೇ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗ್ತಿದೆ. ಸ್ಫೋಟದಿಂದ ಮೂರು ಮನೆಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.