ನವದೆಹಲಿ:ನಿನ್ನೆಯಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ 10 ಜನ ಗೋವಾ ಕಾಂಗ್ರೆಸ್ ಶಾಸಕರು ಇಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು.
ಕಾಂಗ್ರೆಸ್ ಬಿಟ್ಟು ಕಮಲ ಮುಡಿದ 10 ಕೈ ಶಾಸಕರು; ದೆಹಲಿಯಲ್ಲಿ ಜೆಪಿ ನಡ್ಡಾ ಭೇಟಿ - ಜೆಪಿ ನಡ್ಡಾ
ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಸಂಕಷ್ಟದಲ್ಲಿರುವುದರ ಮಧ್ಯೆ ನಿನ್ನೆ ಗೋವಾದಲ್ಲಿ 10 ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದು, ಇಂದು ನವದೆಹಲಿಯಲ್ಲಿ ಬಿಜೆಪಿ ಕಾರ್ಯಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜತೆ ಇವರು ಜೆಪಿ ನಡ್ಡಾ ಭೇಟಿ ಮಾಡಿದ್ದು, ಈ ವೇಳೆ ನಡ್ಡಾ ಇವರಿಗೆ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷಾಂತರ ಮಾಡಿರುವ ಎಲ್ಲರೂ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಇದಾದ ಬಳಿಕ ಮಾತನಾಡಿರುವ ಗೋವಾ ಸಿಎಂ, ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಕೈ ಶಾಸಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆದಷ್ಟು ಬೇಗ ಗೋವಾ ಕ್ಯಾಬಿನೆಟ್ ವಿಸ್ತರಣೆಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಗೋವಾದಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ 20 ಶಾಸಕರನ್ನು ಹೊಂದಿತ್ತು. ಆದರೆ ಇದೀಗ 10 ಶಾಸಕರು ಬಿಜೆಪಿ ಸೇರಿದ್ದರಿಂದ ಕೇವಲ 5 ಶಾಸಕರು ಉಳಿದುಕೊಂಡಿದ್ದಾರೆ. ಇನ್ನು ಆಡಳಿತ ಪಕ್ಷ ಬಿಜೆಪಿಯಲ್ಲಿ 10 ಶಾಸಕರ ಸೇರ್ಪಡೆಯಿಂದ 27ಕ್ಕೆ ಏರಿಕೆಯಾಗಿದೆ.