ಕರ್ನಾಟಕ

karnataka

ETV Bharat / bharat

ಪತಿಯ ಸ್ನೇಹಿತನ ಜೊತೆ ಪತ್ನಿಯ ಸಂಬಂಧ... ಅವಳಿ ಕಂದಮ್ಮಗಳನ್ನು ಕೆರೆಗೆ ಎಸೆದ ನೀಚ! - andra crime news

ಮಹಿಳೆಯೊಬ್ಬಳು ತನ್ನ ಗಂಡನ ಸ್ನೇಹಿತನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಈಕೆಯ ಪ್ರಿಯಕರ ಮಹಿಳೆಯ ಎರಡು ಮುದ್ದು ಕಂದಮ್ಮಗಳನ್ನು ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ.

10-month-old-twins-murdered-in-chtoor-district-due-to-extra-marital-affair
ವಿವಾಹೇತರ ಸಂಬಂಧಕ್ಕೆ ಬಲಿಯಾದ ಮುದ್ದು ಕಂದಮ್ಮಗಳು

By

Published : Sep 18, 2020, 8:21 PM IST

ಚಿತ್ತೂರು (ಆಂಧ್ರಪ್ರದೇಶ): ವಿವಾಹೇತರ ಸಂಬಂಧಕ್ಕೆ ಎರಡು ಮುದ್ದು ಮಕ್ಕಳು ಬಲಿಯಾಗಿವೆ. ಸುಂದರ ಪ್ರಪಂಚ ನೋಡಬೇಕಿದ್ದ 10 ತಿಂಗಳ ಅವಳಿ ಜವಳಿ ಮಕ್ಕಳ ಸಾವು ನೋಡುಗರ ಹೃದಯ ಝಲ್​ ಎನಿಸಿದೆ. ಚಿತ್ತೂರಿನಲ್ಲಿ ಈ ದುರ್ಘಟನೆ ನಡೆದಿದೆ.

ಏನಿದು ಘಟನೆ:

ಮಹಿಳೆಯೊಬ್ಬಳು ತನ್ನ ಗಂಡನ ಸ್ನೇಹಿತ ಉದಯ್ ಕುಮಾರ್ ಎಂಬುವನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು. ಉದಯ್ ಆಟೋ ಡ್ರೈವರ್ ಆಗಿದ್ದಾನೆ. ಮಹಿಳೆಗೆ 10 ತಿಂಗಳ ಪುಣಾರ್ವಿ, ಪುನೀತ್ ಎಂಬ ಇಬ್ಬರು ಮಕ್ಕಳಿದ್ದರು. ಉದಯ್ ಕುಮಾರ್ ಮಹಿಳೆಯನ್ನು ತನ್ನೊಂದಿಗೆ ಬರಲು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದಕ್ಕೆ ಹೆದರಿದ ಮಹಿಳೆ ಆಟೋದಲ್ಲಿ ಮಕ್ಕಳೊಂದಿಗೆ ತೆರಳಿದ್ದಾಳೆ.

ವಿಷ ಸೇವಿಸಿ ಆತ್ಮ,ಹತ್ಯೆಗೆ ಯತ್ನಿಸಿದ ಮಹಿಳೆ ಹಾಗೂ ಆಕೆಯ ಪ್ರಿಯಕರ

ಇದಾದ ಬಳಿಕ ಉದಯ್ ಅವಳಿ ಮಕ್ಕಳನ್ನು ಕೆರೆಗೆ ಎಸೆದು ಕೊಂದಿದ್ದಾನೆ. ನಂತರ ಇಬ್ಬರೂ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಂಗಳವಾರ ಬೆಳಗ್ಗೆ ಕೃಷಿಕರೊಬ್ಬರು ಇವರನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಉದಯಕುಮಾರ್ ತನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಮತ್ತು ಮಕ್ಕಳನ್ನು ಸರೋವರಕ್ಕೆ ಎಸೆದು ಕೊಂದಿದ್ದಾನೆ ಎಂದು ಪತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details