ಪಣಜಿ:ಕರ್ನಾಟಕ ಸರ್ಕಾರದ ಅಸ್ಥಿರತೆ ಮುಂದುವರೆದಿರುವ ಬೆನ್ನಲ್ಲೇ ಪಕ್ಕದ ರಾಜ್ಯ ಗೋವಾದಲ್ಲಿ ಸಹ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ.
ಕರ್ನಾಟಕದ ಅಸ್ಥಿರ ರಾಜಕಾರಣದ ಮಧ್ಯೆ 'ಕೈ'ಗೆ ಶಾಕ್! ಪ್ರತಿಪಕ್ಷ ನಾಯಕ ಸೇರಿ 10 ಶಾಸಕರು ಬಿಜೆಪಿ ಸೇರ್ಪಡೆ! - ಗೋವಾ
ಕಾಂಗ್ರೆಸ್ನ ಹತ್ತು ಶಾಸಕರು ಪಕ್ಷದಿಂದ ಹೊರಬಂದು ಬಿಜೆಪಿ ಸೇರಿದ್ದು, ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕಾವ್ಲೇಕರ್ ಸಹ ಸೇರಿದ್ದಾರೆ. ಈ ಪಕ್ಷಾಂತರ ಸಾಂವಿಧಾನಿಕ ಎಂದು ಎಂದು ಗೋವಾ ಉಪ ಸ್ಪೀಕರ್ ಮೈಕಲ್ ಲೋಬೋ ಮಾಹಿತಿ ನೀಡಿದ್ದಾರೆ.
ಕೈ
ಕಾಂಗ್ರೆಸ್ನ ಹತ್ತು ಶಾಸಕರು ಪಕ್ಷದಿಂದ ಹೊರಬಂದು ಬಿಜೆಪಿ ಜೊತೆಗೆ ವಿಲೀನರಾಗಿದ್ದು, ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕಾವ್ಲೇಕರ್ ಸಹ ಸೇರಿದ್ದಾರೆ ಎಂದು ಗೋವಾ ಉಪ ಸ್ಪೀಕರ್ ಮೈಕಲ್ ಲೋಬೋ ಮಾಹಿತಿ ನೀಡಿದ್ದಾರೆ.
ಹಾಲಿ ಗೋವಾ ಮುಖ್ಯಮಂತ್ರಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಸಿಎಂ ಅವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಇಂದು ನಾವು ಹತ್ತು ಜನ ಶಾಸಕರು ಬಿಜೆಪಿ ಸೇರಿದ್ದೇವೆ ಎಂದು ಚಂದ್ರಕಾಂತ್ ಕಾವ್ಲೇಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.