ಪಣಜಿ: ಕರ್ನಾಟಕ ಸರ್ಕಾರದ ಅಸ್ಥಿರತೆ ಮುಂದುವರೆದಿರುವ ಬೆನ್ನಲ್ಲೇ ಪಕ್ಕದ ರಾಜ್ಯ ಗೋವಾದಲ್ಲಿ ಸಹ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ. ಇಂದು ಅಮಿತ್ ಶಾ ಅವರನ್ನ ಶಾಸಕರು ಭೇಟಿ ಮಾಡಲಿದ್ದಾರೆ.
ಗೋವಾದಲ್ಲೂ ರಾಜಕೀಯ ಪ್ರಹಸನ... 'ಕೈ' ಬಿಟ್ಟು ಬಿಜೆಪಿ ಸೇರಿದ ಕಾಂಗ್ರೆಸ್ನ 10 ಶಾಸಕರು - undefined
ಕಾಂಗ್ರೆಸ್ ತೊರೆದು ಬಿಜೆಪಿ ಜೊತೆ ವಿಲೀನವಾಗಲು ಸಿದ್ದರಿರುವ ಗೋವಾ ರಾಜ್ಯದ 10 ಜನ ಶಾಸರು ಇಂದು ಅಮಿತ್ ಶಾ ಅವರನ್ನ ಭೇಟಿ ಮಾಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ನಾವು ಹತ್ತು ಜನ ಕಾಂಗ್ರೆಸ್ ಶಾಸಕರನ್ನ ದೆಹಲಿಗೆ ಕರೆದೊಯ್ಯುತ್ತಿದ್ದೇವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನ ಭೇಟಿ ಮಾಡಿ ಎಲ್ಲಾ ವಿಷಯಗಳನ್ನ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ಹತ್ತು ಶಾಸಕರು ಪಕ್ಷದಿಂದ ಹೊರಬಂದು ಬಿಜೆಪಿ ಜೊತೆ ವಿಲೀನರಾಗಿದ್ದು, ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕಾವ್ಲೇಕರ್ ಸಹ ಸೇರಿದ್ದಾರೆ. ಹಾಲಿ ಗೋವಾ ಮುಖ್ಯಮಂತ್ರಿ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಸಿಎಂ ಅವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಹತ್ತು ಜನ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದೇವೆ ಎಂದು ಚಂದ್ರಕಾಂತ್ ಕಾವ್ಲೇಕರ್ ಮಾಧ್ಯಮಗಳಿಗೆ ತಿಳಿಸಿದ್ದರು.