ಉತ್ತರಕಾಶಿ: ಕಳೆದ ಕೆಲ ದಿನಗಳಿಂದ ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಉತ್ತರಕಾಶಿಯ ಮಕುಡಿ ಗ್ರಾಮದಲ್ಲಿ ನಾಲ್ವರು ಸಾವನ್ನಪಿದರೆ, ಮೂವರನ್ನ ರಕ್ಷಣೆ ಮಾಡಲಾಗಿದೆ. ಇನ್ನುಳಿದ ಕಡೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಉತ್ತರಾಖಂಡ್ದಲ್ಲಿ ಮಹಾ ಮೇಘಸ್ಫೋಟ: 10 ಮಂದಿ ಸಾವು - ತಾವಿ ನದಿಯಲ್ಲಿ ತೇಲಿ ಹೋಗುತ್ತಿದ್ದವರು
ಈ ಬಾರಿ ಸುರಿಯುತ್ತಿರುವ ಭೀಕರ ಕುಂಭದ್ರೋಣ ಮಳೆಯಿಂದಾಗಿ ಉತ್ತರಾಖಂಡದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಜಮ್ಮುವಿನ ತಾವಿ ನದಿ ತುಂಬಿ ಹರಿದ ಪರಿಣಾಮ ನದಿಯಲ್ಲಿ ಸಿಲುಕಿಕೊಂಡ ಇಬ್ಬರನ್ನು ಪಾರುಮಾಡಲಾಗಿದೆ.
ಕುಂಭದ್ರೋಣ ಮಳೆಗೆ ಸುಮಾರು 10 ಮಂದಿ ಸಾವನ್ನಪ್ಪಿದ್ದಾರೆ. ಭಾರಿ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಎನ್ಡಿಆರ್ಎಫ್ ಪಡೆ ಸತತವಾಗಿ ಶ್ರಮ ಹಾಕುತ್ತಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಈ ವೇಳೆ ಅಪಾಯಕ್ಕೆ ಸಿಲುಕಿದ ಮೂವರನ್ನ ರಕ್ಷಣೆ ಮಾಡಲಾಗಿದೆ. ಒಬ್ಬ ಕಣ್ಮರೆಯಾಗಿದ್ದು, ಹುಡುಕಾಟ ಮುಂದುವರಿದಿದೆ.
ತಾವಿ ನದಿಯಲ್ಲಿ ತೇಲಿ ಹೋಗುತ್ತಿದ್ದವರ ರಕ್ಷಣೆ: ಈ ನಡುವೆ ಜಮ್ಮುವಿನಲ್ಲೂ ತಾವಿ ನದಿ ತುಂಬಿ ಹರಿಯುತ್ತಿದೆ. ಜಮ್ಮುವಿನಲ್ಲಿ ಇಬ್ಬರು ಬ್ರಿಡ್ಜ್ ಬಳಿ ಅಪಾಯಕ್ಕೆ ಸಿಲುಕಿದ್ದರು. ಅವರನ್ನ ರಕ್ಷಣಾ ಪಡೆ ಹಲವು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿವೆ. ತಾವಿ ನದಿಯಲ್ಲಿ ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಈ ಯುವಕರು ಅಪಾಯಕ್ಕೆ ಸಿಲುಕಿಕೊಂಡಿದ್ದರು.