ಜಮ್ಮು:ಜುಲೈ 1ರಂದು ಆರಂಭವಾದ ಅಮರನಾಥ ಯಾತ್ರೆಗೆ ಇಲ್ಲಿಯವರೆಗೆ ಸುಮಾರು 1.44 ಲಕ್ಷ ಯಾತ್ರಿಕರು ಭೇಟಿ ನೀಡಿದ್ದು, 3,888 ಮೀಟರ್ ಪವಿತ್ರ ಶಿವಲಿಂಗನ ದರ್ಶನ ಪಡೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ಭಗವತಿ ನಗರ ಪ್ರಯಾಣಿಕರ ನಿವಾಸದಿಂದ 5,395 ಯಾತ್ರಿಕರ ಮತ್ತೊಂದು ಬ್ಯಾಚ್ ತೆರಳಿದ್ದು ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಹೊರಟ ಯಾತ್ರಿಕರಲ್ಲಿ 1,966 ಯಾತ್ರಿಕರು ಬಾಲ್ಟಾಲ್ ಬೇಸ್ ಕ್ಯಾಂಪ್ ಮಾರ್ಗ ಮೂಲಕ ಹೊರಟರೆ, 3,429 ಯಾತ್ರಾರ್ಥಿಗಳು ಪಹಲ್ಗಾಂವ್ ಬೇಸ್ ಕ್ಯಾಂಪ್ ಮಾರ್ಗ ಮೂಲಕ 45 ಕಿಲೋಮೀಟರ್ ದೂರದಲ್ಲಿರುವ ಪವಿತ್ರ ಗುಹೆಯನ್ನು ತಲುಪುತ್ತಾರೆ. ಜೊತೆಗೆ, ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್‌ಗಳ ಸೇವೆಗಳಿವೆ.