ಥಾಣೆ (ಮಹಾರಾಷ್ಟ್ರ):ಮರಕ್ಕೆ ಕಾರು ಗುದ್ದಿ ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಥಾಣೆಯ ಘೋಡ್ಬಂದರ್ ರಸ್ತೆಯಲ್ಲಿ ನಡೆದಿದೆ.
ಮರಕ್ಕೆ ಗುದ್ದಿದ ಕಾರು,ಸ್ಥಳದಲ್ಲೇ ಓರ್ವ ಸಾವು, ಮೂವರಿಗೆ ಗಾಯ - ಥಾಣೆ ಕಾರು ಅಪಘಾತ
ಮರಕ್ಕೆ ಕಾರು ಗುದ್ದಿ, ಓರ್ವ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಥಾಣೆ ಅಪಘಾತ
ಕಪೂರ್ಬಾವಡಿ ಪ್ರದೇಶದ ವಿಹಾಗ್ ಹೋಟೆಲ್ ಬಳಿ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಕಪೂರ್ಬಾವಡಿ ಪೊಲೀಸ್, ಪ್ರಾದೇಶಿಕ ವಿಕೋಪ ನಿರ್ವಹಣಾ ಘಟಕ ಹಾಗೂ ಒಂದು ಅಗ್ನಿ ಶಾಮಕದಳ ಧಾವಿಸಿ, ಕಾರಿನಲ್ಲಿದ್ದವರನ್ನು ರಕ್ಷಿಸಿದೆ.
ಕಾರಿನಲ್ಲಿದ್ದ ರಿಷಿ ರಾಥೋಡ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದು, ರವಿತೇಜ ಕನ್ನಾಡಿ, ಹಿಮಾಂಶು ಗಾರ್ಗ್, ಪ್ರಾಚಿ ಪೆಡಿವಾಲ್ ಎಂಬುವರಿಗೆ ಗಾಯಗಳಾಗಿದ್ದು, ಟೈಟಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.