ಕರ್ನೂಲ್: ವಿಶಾಖಪಟ್ಟಣದ ಎಲ್.ಜಿ.ಪಾಲಿಮರ್ಸ್ ವಿಷಾನಿಲ ಸೋರಿಕೆ ದುರಂತದ ನೆನಪು ಮಾಸುವ ಮುನ್ನವೇ ಆಂಧ್ರ ಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದೆ.
ಕೃಷಿ ಕೈಗಾರಿಕಾ ಘಟಕದಲ್ಲಿ ಅನಿಲ ದುರಂತ: ಜನರಲ್ ಮ್ಯಾನೇಜರ್ ಸಾವು: ಮೂವರ ಸ್ಥಿತಿ ಗಂಭೀರ - ಅನಿಲ ದುರಂತ
ಆಂಧ್ರದ ಕರ್ನೂಲ್ ಜಿಲ್ಲೆಯ ನಂದಿ ಗ್ರೂಪ್ ಒಡೆತನದ ಎಸ್‌ಪಿವೈ ಕೃಷಿ ಕೈಗಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾಗಿದ್ದು, ಘಟನೆಯಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದೆ.
ಆಂಧ್ರದ ಕೃಷಿ ಕೈಗಾರಿಕಾ ಘಟಕದಲ್ಲಿ ಅನಿಲ ದುರಂತ
ಇಂದು ಆಂಧ್ರದ ಕರ್ನೂಲ್ ಜಿಲ್ಲೆಯ ನಂದಿ ಗ್ರೂಪ್ ಒಡೆತನದ ಎಸ್‌ಪಿವೈ ಕೃಷಿ ಕೈಗಾರಿಕಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಘಟನೆಯಲ್ಲಿ ಕಂಪನಿಯ ಜನರಲ್ ಮ್ಯಾನೇಜರ್ ಶ್ರೀನಿವಾಸ ರಾವ್ ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.