ಕರ್ನಾಟಕ

karnataka

ETV Bharat / bharat

ಶನಿವಾರದ ಫಲಾಫಲ..ಯಾವ ರಾಶಿಯವರಿಗೆ ಇಂದು ಯಶಸ್ಸು ದೊರೆಯಲಿದೆ..? - 06 June 2020 ETV Bharat Astrology

ಶನಿವಾರದ ರಾಶಿಫಲ

06 June 2020 ETV Bharat Astrology
ಶನಿವಾರದ ಫಲಾಫಲ

By

Published : Jun 6, 2020, 5:01 AM IST

ಮೇಷ

ನೀವು ಇಂದು ಆಧ್ಯಾತ್ಮಿಕತೆಯ ಸಾಧ್ಯತೆಗೆ ಮುಕ್ತವಾಗಿರುತ್ತೀರಿ. ಈ ರೀತಿಯಲ್ಲಿ ನೀವು ನಿಮ್ಮ ಹಿಂದಿನ ತಪ್ಪುಗಳಿಗೆ ಜವಾಬ್ದಾರಿ ತೆಗೆದುಕೊಳ್ಳಲು ಬಯಸಬಹುದು, ಅದರಲ್ಲಿ ನಿಮ್ಮ ನೆರೆಹೊರೆಯವರೊಂದಿಗೆ ಹೊಂದಿರುವ ಅಷ್ಟೇನೂ ಒಳ್ಳೆಯದಲ್ಲದ ಸಂಬಂಧಗಳೂ ಸೇರಿವೆ. ಇದು ನಿಮ್ಮ ಭವಿಷ್ಯದ ಸಾಧನೆಗೆ ತಳಹದಿ ನಿರ್ಮಿಸಲು ನೆರವಾಗುತ್ತದೆ.

ವೃಷಭ

ಒಂದು ಸಾಂಪ್ರದಾಯಿಕ ದಿನ ಅಸಾಧಾರಣ ಸಂಜೆಯಾಗಿ ಅರಳುವ ಬಲವಾದ ಸಾಧ್ಯತೆ ಇದೆ. ಆದರೆ, ಸಂಜೆ ಒತ್ತಡ ಮತ್ತು ಆತಂಕದಿಂದ ಕೂಡಿರುತ್ತದೆ. ಏನೇ ಆದರೂ, ನಿಮ್ಮ ಸಂಜೆ ವಿಶಿಷ್ಟವಾಗಿದ್ದು ಸಂಗಾತಿಯ ಮಮತೆ ಮತ್ತು ಆತ್ಮೀಯತೆಯಲ್ಲಿ ನಿರಾಳರಾಗುತ್ತೀರಿ.

ಮಿಥುನ

ನೀವು ನಿಮ್ಮ ಆಹಾರದ ಅಭ್ಯಾಸಗಳಿಗೆ ವಿಶೇಷ ಗಮನ ನೀಡಬೇಕಾದ ಸೂಚನೆಗಳಿವೆ. ನೀವು ಸಭೆಗೆ ಹೋಗಬಹುದು ಅಥವಾ ದಿನದ ನಂತರ ಹೊಸ ಕಾರ್ಯ ಪ್ರಾರಂಭಿಸಬಹುದು. ಕೆಲಸದಲ್ಲಿ, ನೀವು ಹಿರಿಯರಿಂದ ಬೆಂಬಲ ಮತ್ತು ಉತ್ತೇಜನ ಎರಡನ್ನೂ ಪಡೆಯುತ್ತೀರಿ.

ಕರ್ಕಾಟಕ

ಇಂದು ನಿಮ್ಮ ಕೋಪವನ್ನು ಹಿಡಿತದಲ್ಲಿ ಇರಿಸಿಕೊಳ್ಳಿ. ಧ್ಯಾನ ಮಾಡಿರಿ ಮತ್ತು ಕೆಲಸದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ. ಪರಿಣಾಮಗಳು ನೀವು ಅನುಮಾನಿಸಿದ್ದಕ್ಕಿಂತ ತೀವ್ರವಾಗಿರುತ್ತವೆ.

ಸಿಂಹ

ನೀವು ಕಲಾತ್ಮಕತೆಯ ಕೃಪೆ ಹೊಂದಿದ್ದೀರಿ ಮತ್ತು ಇಂದು ನೀವು ನಿಮ್ಮ ಕೆಲಸವನ್ನು ಪ್ರದರ್ಶಿಸುತ್ತೀರಿ. ನೀವು ಸಂಪೂರ್ಣ ಉತ್ಸಾಹ ಮತ್ತು ಶಕ್ತಿಯೊಂದಿಗೆ ಬೀಗುತ್ತಿದ್ದೀರಿ. ನಿಮ್ಮ ಟೀಕಾಕಾರರನ್ನು ಸುಮ್ಮನಾಗಿಸಲು ನೀವು ಮಾಡುತ್ತಿರುವ ಕೆಲಸವನ್ನೇ ಉತ್ತಮವಾಗಿ ಮಾಡಿ.

ಕನ್ಯಾ

ಸಾಧಾರಣ, ದಣಿವಿನ ಬೆಳಗಿನಿಂದ, ಈ ದಿನ ಕ್ರಮೇಣ ಅತ್ಯಂತ ಉತ್ಸಾಹದ ಸಂಜೆಯಾಗಿ ಬದಲಾಗುತ್ತದೆ. ಸಂಜೆಯ ವೇಳೆಗೆ ನೀವು ಅಡ್ಡಿ ಎದುರಿಸಿದರೂ ನೀವು ಒತ್ತಡದಿಂದ ಮುಕ್ತರಾದ ಭಾವನೆ ಹೊಂದುತ್ತೀರಿ. ಆದಾಗ್ಯೂ, ಎಲ್ಲಾ ಒತ್ತಡ ಸಂಜೆಯ ವೇಳೆಗೆ ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿರುವಾಗ ಕರಗಿ ಹೋಗುತ್ತದೆ.

ತುಲಾ

ಇಂದು ಯಶಸ್ಸಿಗೆ ನೇರದಾರಿ, ನಿಮ್ಮ ನೇರವಾದ ಪ್ರವೃತ್ತಿಯೇ ಅದಕ್ಕೆ ಕಾರಣ. ಕ್ಷುಲ್ಲಕ ವಿಷಯಗಳು ನಿಮಗೆ ದಿನದ ಪ್ರಾರಂಭದಲ್ಲಿ ದೊಡ್ಡ ರೀತಿಯಲ್ಲಿ ತೊಂದರೆ ಉಂಟು ಮಾಡಬಹುದು. ಆದರೆ ಅವುಗಳನ್ನು ಸರಿಪಡಿಸಿಕೊಳ್ಳಿ, ನಂತರ ಸರಾಗ ಪ್ರಯಾಣ. ವ್ಯಾಪಾರದಲ್ಲಿ ವಿವಿಧ ಮೂಲಗಳಿಂದ ಹಣದ ಹರಿವನ್ನು ನಿರೀಕ್ಷಿಸಿ. ನಿಮ್ಮದೇ ಸಾಮರ್ಥ್ಯಗಳು ಮತ್ತು ಪ್ರಯತ್ನಗಳು ಈ ಸಕಾರಾತ್ಮಕತೆಗೆ ಕಾರಣ.

ವೃಶ್ಚಿಕ

ಅತ್ಯಂತ ಘಟನೀಯ ದಿನ ನಿಮಗಾಗಿ ಕಾದಿದೆ. ದಿನದ ಮೊದಲಾರ್ಧ ದೈನಂದಿನ ಚಟುವಟಿಕೆಗಳಲ್ಲಿ ತುಂಬಿದ್ದು ನಿಮ್ಮ ಕ್ಷೇತ್ರದ ತೀವ್ರ ಸ್ಪರ್ಧೆಯ ಪೈಪೋಟಿ ಎದುರಿಸುತ್ತೀರಿ. ಆದರೆ, ನೀವು ದಿನದ ದ್ವಿತೀಯಾರ್ಧದಲ್ಲಿ ಫ್ಯಾಷನಿಸ್ಟ್​​​​​​​​​​ ಆಗಿದ್ದು ನೀವು ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಜಿಸುತ್ತೀರಿ ಮತ್ತು ಕೇಂದ್ರ ಸ್ಥಾನವನ್ನು ಪಡೆಯುತ್ತೀರಿ.

ಧನು

ನೀವು ಮುಂದೆ ಹೋದಾಗ ಬಲಹೀನರಂತೆ ಕಂಡರೆ ಅದಕ್ಕೆ ನಿಮ್ಮ ಸಾವಿರ ವ್ಯಾಟ್​​​​ಗಳ ಹೊಳೆಯುವ ನಗುವೇ ಕಾರಣ. ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ಪರಿಣಿತಿ ಮತ್ತು ಕೌಶಲ್ಯಗಳಿಂದ ಅನುಕೂಲ ಪಡೆಯುತ್ತಾರೆ. ಸಂಜೆಯಲ್ಲಿ, ನಿಮ್ಮ ಪ್ರಿಯತಮೆಯೊಂದಿಗೆ ವಿಶೇಷ ಡೇಟ್ ಯೋಜಿಸಿರುವುದರಿಂದ ನಿಮ್ಮ ಹೃದಯ ಬಡಿತ ಜೋರಾಗುತ್ತದೆ.

ಮಕರ

ಮುಂದಿರುವ ಥ್ರಿಲ್ಲಿಂಗ್ ದಿನಕ್ಕಾಗಿ ಸಜ್ಜಾಗಿರಿ. ಸಾಕಷ್ಟು ಅನಿರೀಕ್ಷಿತ ಘಟನೆಗಳು ಸಂತೋಷ ತರುತ್ತವೆ, ಮತ್ತು ನೀವು ದಿಢೀರ್ ಎಂದು ಭಾವೋದ್ವೇಗದ ಸಂತೋಷ ಕಾಣುತ್ತೀರಿ. ಕೆಲಸದಲ್ಲಿ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ನಿಮ್ಮ ಬಹುತೇಕ ಸಮಯ ಕಬಳಿಸುತ್ತದೆ. ಹೊಸ ಉದ್ಯಮ ಅಥವಾ ವ್ಯಾಪಾರ ಸಂಸ್ಥೆ ಪ್ರಾರಂಭಿಸಲು ತಕ್ಕಷ್ಟು ಹಣಕಾಸಿನ ಬೆಂಬಲ ಪಡೆಯುವ ಸಾಧ್ಯತೆಗಳಿವೆ. ಈಗಿನ ಉದ್ಯಮವೂ ನಿರೀಕ್ಷೆ ಮೀರಿ ಬೆಳೆಯುತ್ತದೆ.

ಕುಂಭ

ಇಂದು ನೀವು ತಾಳ್ಮೆಯಿಂದ ಇರಬೇಕು. ಸಂಜೆ ವೇಳೆಗೆ ನಿಮ್ಮ ಮೇಲೆ ನಿಮ್ಮವರೇ ಕೂಗಾಡಬಹುದು. ಆದರೆ ನೀವು ಎಲ್ಲದಕ್ಕೂ ಶಾಂತಿಯಿಂದ ಉತ್ತರಿಸಿದರೆ ಒಳ್ಳೆಯದು.

ಮೀನ

ಉತ್ಪಾದಕ ಮತ್ತು ಫಲಪ್ರದ ದಿನ ನಿಮಗಾಗಿ ಕಾದಿದೆ. ನೀವು ಹಳೆಯ ಮಿತ್ರರನ್ನು ಭೇಟಿಯಾಗಬಹುದು ಅಥವಾ ಹಳೆಯ ಪ್ರೇಮಿಯೊಂದಿಗೆ ಕಾಲ ಕಳೆಯಬಹುದು. ಸಾಮಾಜಿಕ ಸಭೆಗಳಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗುವುದನ್ನು ನಿರೀಕ್ಷಿಸಿರಿ. ಎಲ್ಲವನ್ನೂ ಆನಂದಿಸಿ.

ABOUT THE AUTHOR

...view details