ಕರ್ನಾಟಕ

karnataka

ETV Bharat / bharat

ಶುಕ್ರವಾರದ ಈ ದಿನ ಲಕ್ಷ್ಮಿ ಕೃಪೆ ಯಾವ ರಾಶಿಯವರಿಗೆ ಲಭಿಸಲಿದೆ...?

ಶುಕ್ರವಾರದ ದಿನಭವಿಷ್ಯ

02 October 2020 Etv Bharat horoscope
ಶುಕ್ರವಾರದ ದಿನಭವಿಷ್ಯ

By

Published : Oct 2, 2020, 5:00 AM IST

ಮೇಷ

ಯೋಗಿಗಳಿಂದ ನೀವು ಪ್ರಭಾವಿತರಾಗಿದ್ದೀರಿ. ಆಧ್ಯಾತ್ಮದತ್ತ ನಿಮ್ಮ ಮನಸ್ಸು ಹೊರಳುತ್ತದೆ. ಸಂಗೀತ, ನೃತ್ಯದಲ್ಲಿ ಆಸಕ್ತಿ ತೋರಲಿದ್ದೀರಿ. ಒಳ್ಳೆಯ ದಿನ ಹಾಗೂ ಯಶಸ್ಸು ನಿಮಗಾಗಿ ಕಾಯುತ್ತಿದೆ.

ವೃಷಭ

ನೀವು ಸೋಮಾರಿಯಾಗಿರುವುದರಿಂದ ಪ್ರಯತ್ನಗಳ ಪರಿಣಾಮ ಕಡಿಮೆಯಾಗುತ್ತಿದೆ. ನಿಮ್ಮ ನಿಧಾನಗತಿಯನ್ನು ದೂರತಳ್ಳಿ ಶ್ರಮದಿಂದ ಕೆಲಸ ಮಾಡಿದರೆ ನೀವು ಬಯಸುವುದು ಖಂಡಿತ ದೊರೆಯಲಿದೆ.

ಮಿಥುನ

ಇಂದು ಕೆಲಸದಲ್ಲಿ ನೀವು ವ್ಯಸ್ತರಾಗಿದ್ದರೂ, ನೀವು ಕುಟುಂಬಕ್ಕೆ ಕೂಡಾ ಸಮಯ ನೀಡುತ್ತೀರಿ ಮತ್ತು ಸಣ್ಣ ಸುತ್ತಾಟ ಆಯೋಜಿಸುವ ಮೂಲಕ ಆಶ್ಚರ್ಯಗೊಳಿಸುತ್ತೀರಿ. ನಿಮ್ಮ ಕನಸು ನನಸಾಗಲಿದೆ.

ಕರ್ಕಾಟಕ

ನಿಮ್ಮ ಕೋಪ ನಿಯಂತ್ರಿಸಿ, ಇಲ್ಲದಿದ್ದರೆ ನಿಮ್ಮ ಹತ್ತಿರದವರು ದುಃಖ ಪಡುತ್ತಾರೆ. ಲೇಖಕರು ಸೃಜನಶೀಲ ಫಲಿತಾಂಶವನ್ನು ಪ್ರದರ್ಶಿಸಬಹುದು. ಕಲಾವಿದರಿಗೂ ದಿನ ಉತ್ತಮವಾಗಿದೆ. ಇದು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸೂಕ್ತ ಕಾಲ.

ಸಿಂಹ

ಉತ್ತಮ ಸ್ನೇಹಿತರು ನಮ್ಮ ಕಷ್ಟದಲ್ಲಿ ನೆರವು ನೀಡುತ್ತಾರೆ. ಹಲವು ವರ್ಷಗಳಿಂದ ಸಾಮಾಜಿಕ ವರ್ಚಸ್ವಿಯಾಗುವ ನಿಮ್ಮ ಸಹಜ ಉದ್ದೇಶದಿಂದ, ನೀವು ಅತ್ಯುತ್ತಮ ಮಿತ್ರವೃಂದ ರೂಪಿಸಿಕೊಂಡಿದ್ದು ಯಾವುದೇ ಸನ್ನಿವೇಶದಲ್ಲಿ ಅವರಲ್ಲಿ ವಿಶ್ವಾಸವಿಡಬಹುದು.

ಕನ್ಯಾ

ನೀವು ಶಾಂತ ಮತ್ತು ಸ್ಥಿರವಾಗಿರುತ್ತೀರಿ. ನಿಮ್ಮ ಮನಃಶಾಂತಿಗೆ ತೊಂದರೆ ಕೊಡುವಂತ ಯಾವುದೇ ವಿಚಾರವಿಲ್ಲ. ನಿಮ್ಮ ಕುಟುಂಬ ಮತ್ತು ಮಿತ್ರರು ನಿಮ್ಮನ್ನು ಪೂರ್ಣವಾಗಿ ಬೆಂಬಲಿಸುತ್ತಾರೆ. ಇತರರಿಗೆ ಮಾಡಲು ಕಷ್ಟವಾದ ಕೆಲಸವನ್ನು ನೀವು ಸುಲಭವಾಗಿ ಮಾಡಿ ಮುಗಿಸಲಿದ್ದೀರಿ.

ತುಲಾ

ಭವಿಷ್ಯದ ಅವಕಾಶಗಳನ್ನು ಪಡೆಯಲು, ನೀವು ಹಳೆಯ ಅನುಭವವನ್ನು ಆಶ್ರಯಿಸಬೇಕು. ನಿಮಗೆ ಹತ್ತಿರವಿರುವ ವ್ಯಕ್ತಿಗಳ ಕುರಿತು ಪೊಸೆಸಿವ್ ಆಗುತ್ತೀರಿ. ಕೆಲವೊಂದು ಅಹಿತಕರ ಸನ್ನಿವೇಶಗಳನ್ನು ನೀವು ಎದುರಿಸಬೇಕು. ಕೆಲ ಸಣ್ಣ ಸಮಸ್ಯೆಗಳು ಹೊರತಾಗಿ ನಿಮ್ಮ ದಿನ ಒಳ್ಳೆಯದಾಗಿದೆ.

ವೃಶ್ಚಿಕ

ವಿಭಿನ್ನ ವ್ಯಕ್ತಿತ್ವದ ಜನರನ್ನು ನೀವು ಭೇಟಿಯಾಗಲಿದ್ದೀರಿ. ಕೆಲವರು ನಿಮಗೆ ಖುಷಿ ನೀಡಿದರೆ ಮತ್ತೆ ಕೆಲವರು ಶಾಕ್ ನೀಡಲಿದ್ದಾರೆ. ಎಲ್ಲವನ್ನು ತಾಳ್ಮೆಯಿಂದ ಜಾಣತನದಿಂದ ಎದುರಿಸಿ.

ಧನು

ನೀವು ಒತ್ತಡದ ಜೀವನದ ಅಡ್ಡ ಪರಿಣಾಮಗಳನ್ನು ಅನುಭವಿಸುತ್ತಿದ್ದಿರಿ. ಆದರೆ ಇನ್ಮುಂದೆ ಅದು ಇರುವುದಿಲ್ಲ. ನೀವು ಆರೋಗ್ಯದ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದೀರಿ. ಒಳ್ಳೆಯ ಕೆಲಸದಲ್ಲಿ ಭಡ್ತಿ ಅಥವಾ ವೇತನ ಹೆಚ್ಚಳದ ಸುದ್ದಿ ನಿಮಗೆ ಸಂತೋಷ ನೀಡಲಿದೆ.

ಮಕರ

ಭಾವನೆಗಳಿಂದ ಹೊರಬನ್ನಿ, ನೀವು ಮಾಡುವ ನಿರ್ಧಾರಗಳು ಯಶಸ್ಸಿನ ದಾರಿಯಲ್ಲಿರಬಹುದು. ನಿಮ್ಮ ಭಾವನೆಗಳು ಭವಿಷ್ಯದ ಸಾಧ್ಯತೆಗಳನ್ನು ಹಾಳು ಮಾಡುತ್ತವೆ ಏಕೆಂದರೆ ಹಾನಿಯಾದ ನಂತರ ರಿಪೇರಿ ಸಾಧ್ಯವಿಲ್ಲ. ಇಂದು ನಿಮ್ಮ ವಿನಯಪೂರ್ವಕ ಸ್ವಭಾವ ಮತ್ತು ಸೌಹಾರ್ದತೆ ಹಲವರ ಹೃದಯಗಳನ್ನು ಗೆಲ್ಲಬಹುದು.

ಕುಂಭ

ನಿಮ್ಮ ಭಾವನೆಗಳು ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ. ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ

ನಿಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ನೀಡಬೇಕು ಮತ್ತು ಗಂಭೀರವಾಗಿ ನೀವು ಮಾಡಬೇಕಾದ ಬದಲಾವಣೆಗಳ ಕುರಿತು ಆಲೋಚಿಸಬೇಕು. ಈ ವಿಷಯದಲ್ಲಿ ನೀವು ನಿಮ್ಮ ಹೃದಯದ ಮಾರ್ಗದರ್ಶನ ಪಡೆಯುತ್ತೀರಿ. ಆದರೆ ಇದು ನಿಮ್ಮ ಸುವರ್ಣ ಕಾಲವಾದ್ದರಿಂದ ಚಿಂತಿಸುವ ಅಗತ್ಯವಿಲ್ಲ.

ABOUT THE AUTHOR

...view details