ಕರ್ನಾಟಕ

karnataka

ETV Bharat / bharat

ಡೆಲ್ಟಾ ರೂಪಾಂತರದ ವಿರುದ್ಧ ಕೋವಾಕ್ಸಿನ್ ಲಸಿಕೆ ಶೇ.65.2ರಷ್ಟು ಪರಿಣಾಮಕಾರಿ - ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳು

ಕೋವಾಕ್ಸಿನ್ ಲಸಿಕೆಯು ಜನರನ್ನು ಕೋವಿಡ್​ನಿಂದ ಗಂಭೀರವಾದ ಆರೋಗ್ಯ ಸಮಸ್ಯೆಗೆ ತುತ್ತಾಗುವ, ಐಸಿಯುಗೆ ದಾಖಲಾಗುವ ಮತ್ತು ಸಾವಿನ ಸಂಖ್ಯೆಯನ್ನು ಶೇ.100ರಷ್ಟು ತಡೆದಿದ್ದು, ಡೆಲ್ಟಾ ರೂಪಾಂತರದ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿಯಾಗಿ ಹೋರಾಡಿದೆ ಎಂದು ಭಾರತ್​ ಬಯೋಟೆಕ್​​ ಹೇಳಿದೆ.

covaxin
ಕೋವಾಕ್ಸಿನ್

By

Published : Nov 25, 2021, 12:03 PM IST

ಹೈದರಾಬಾದ್​​: ಭಾರತ್ ಬಯೋಟೆಕ್ ತನ್ನ ಕೋವಿಡ್​ ಲಸಿಕೆಯಾದ 'ಕೋವಾಕ್ಸಿನ್' ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರದ ವಿರುದ್ಧ ಇದು ಶೇ. 65.2ರಷ್ಟು ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ತಿಳಿಸಿದೆ.

ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯ ಸಂಶೋಧಕರು ಇದನ್ನು ಸಾಬೀತು ಮಾಡಿದ್ದು, ಈ ಅಧ್ಯಯನದ ವರದಿ 'ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳು' ಎಂಬ ಜರ್ನಲ್​ನಲ್ಲಿ ನವೆಂಬರ್​ 23ರಂದು ಪ್ರಕಟವಾಗಿದೆ. ಈ ವಿಚಾರ ಹಂಚಿಕೊಂಡಿದ್ದಕ್ಕಾಗಿ ಏಮ್ಸ್ ಸಂಶೋಧಕರನ್ನು ಭಾರತ್ ಬಯೋಟೆಕ್ ಶ್ಲಾಘಿಸಿದೆ.

ಭಾರತದಲ್ಲಿ ಕೋವಿಡ್​ ಎರಡನೇ ಅಲೆಯ ವೇಳೆ, ಅಂದರೆ ಡೆಲ್ಟಾ ರೂಪಾಂತರ ಉಲ್ಬಣಗೊಳ್ಳುವ ವೇಳೆ ಏಪ್ರಿಲ್ 15 ಮತ್ತು ಮೇ 15 ನಡುವೆ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುತ್ತಿರುವ ಆಸ್ಪತ್ರೆಯ 2,714 ಆರೋಗ್ಯ ಕಾರ್ಯಕರ್ತರ ಡೇಟಾವನ್ನು ಈ ಅಧ್ಯಯನ ಆಧರಿಸಿದೆ. ಕೋವಾಕ್ಸಿನ್ ಲಸಿಕೆಯ ಎರಡೂ ಡೋಸ್​ ಪಡೆದವರಲ್ಲಿ ಡೆಲ್ಟಾ ರೂಪಾಂತರದ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿ ಈ ಲಸಿಕೆ ಹೋರಾಡಿದೆ ಎಂಬುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ: India Covid Report: ದೇಶದಲ್ಲಿ ನಿನ್ನೆ 396 ಮಂದಿ ಕೊರೊನಾಗೆ ಬಲಿ; ಮೃತರ ಸಂಖ್ಯೆ 4.66 ಲಕ್ಷಕ್ಕೆ ಏರಿಕೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧಿಕಾರಿ ಜಾಕೋಬ್ ಜಾನ್, ಭಾರತ್ ಬಯೋಟೆಕ್‌ನ ಕೋವಾಕ್ಸಿನ್​ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗವನ್ನು ಸಾರ್ವಜನಿಕರ ಮೇಲೆ ಮಾಡಲಾಯಿತು ಹಾಗೂ ಈ ಅಧ್ಯಯನವನ್ನು ಏಮ್ಸ್​ನ ಆರೋಗ್ಯ ಕಾರ್ಯಕರ್ತರ ಮೇಲೆ ವಿಶೇಷವಾಗಿ ಎರಡನೇ ಅಲೆಯ ಸಂದರ್ಭ ಮಾಡಲಾಯಿತು.

ಕೋವಾಕ್ಸಿನ್ ಲಸಿಕೆಯು ಜನರನ್ನು ಕೋವಿಡ್​ನಿಂದ ಗಂಭೀರವಾದ ಆರೋಗ್ಯ ಸಮಸ್ಯೆಗೆ ತುತ್ತಾಗುವ, ಐಸಿಯುಗೆ ದಾಖಲಾಗುವ ಮತ್ತು ಸಾವಿನ ಸಂಖ್ಯೆಯನ್ನು ಶೇ.100ರಷ್ಟು ತಡೆಯಿತು. ಒಂದು ಡೋಸ್​ ಪಡೆದ ಮೇಲೆ ಸೋಂಕಿಗೆ ಒಳಗಾಗುವುದನ್ನು ಶೇ.50ರಷ್ಟು ತಪ್ಪಿಸಿದೆ ಹಾಗೂ ಎರಡೂ ಡೋಸ್​ ಪಡೆದವರ ಮೇಲೆ ಶೇ.77.8 ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ತಿಳಿಸಿದರು.

ABOUT THE AUTHOR

...view details