ಹೈದರಾಬಾದ್:ಭಾರತ್ ಬಯೋಟೆಕ್ ಕೋವಿಡ್ -19 ಲಸಿಕೆ ಕೋವಾಕ್ಸಿನ್ನ ಮೂರನೇ ಹಂತದ ಪ್ರಯೋಗ ಪ್ರಾರಂಭಿಸಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ತಿಳಿಸಿದ್ದಾರೆ.
ನಾವು ಇಂದು ಕೋವಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗಗಳನ್ನು ಪ್ರವೇಶಿಸಿದ್ದೇವೆ. ಆರೋಗ್ಯ ಸಂಬಂಧಿತ ರಕ್ಷಣಾತ್ಮಕ ರಾಜತಾಂತ್ರಿಕತೆಯಲ್ಲಿ ಭಾರತವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.
130 ಕೋಟಿ ಜನರಿಗೆ ಲಸಿಕೆ ವಿತರಿಸುವ ನಿರೀಕ್ಷೆಯ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ. ಇದು ಎರಡು ಡೋಸ್ ಚುಚ್ಚುಮದ್ದಿನ ಲಸಿಕೆಯಾಗಿದೆ. ಹೀಗಾಗಿ, ನನಗೆ ಅಷ್ಟಾಗಿ ಸಂತೋಷ ಅನಿಸುತ್ತಿಲ್ಲ. ಎಲ್ಲರಿಗೂ ನೀಡಲು 260 ಕೋಟಿ ಡೋಸ್ಗಳ ಅವಶ್ಯಕತೆಯಿದೆ ಎಂದು ತಿಳಿಸಿದರು.
ಎರಡು ಡೋಸ್ ಲಸಿಕೆ ವಿತರಿಸುವ ದುಃಸ್ವಪ್ನ ತಪ್ಪಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಭಾರತ್ ಬಯೋಟೆಕ್ ಸಹ ಏಕ ಡೋಸ್ ಲಸಿಕೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದು ಮೂಗಿನ ಹನಿಯಾಗಿ ಕಾರ್ಯನಿರ್ವಹಿಸುತ್ತದೆ. ಮೂಗಿನ ಹನಿಗೆ ಎರಡು ಹನಿಗಳು ಬೇಕಾಗುತ್ತವೆ. ಆದರೆ ಒಂದೇ ಡೋಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.