ಹೈದರಾಬಾದ್ (ತೆಲಂಗಾಣ):ಭಾರತಕ್ಕೆ ದೇಶೀಯ ಕೋವಿಡ್ ಲಸಿಕೆ ಉತ್ಪಾದಿಸುತ್ತಿರುವ ಹೈದರಾಬಾದ್ನ ಭಾರತ್ ಬಯೋಟೆಕ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲ್ಲ ಅವರು ತಮ್ಮ ಕೋವಾಕ್ಸಿನ್ ಲಸಿಕೆಯ 4,000 ಡೋಸ್ಗಳನ್ನು ಮಹಾರಾಷ್ಟ್ರದ ಆನಂದವನ್ ಸಮುದಾಯ ಪುನರ್ವಸತಿ ಕೇಂದ್ರಕ್ಕೆ ದಾನ ನೀಡಲು ಮುಂದಾಗಿದ್ದಾರೆ.
ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ದಿವಂಗತ ಬಾಬಾ ಆಮ್ಟೆ ಅವರು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ 1949ರಲ್ಲಿ ಕುಷ್ಠರೋಗ ರೋಗಿಗಳಿಗೆ ಮತ್ತು ವಿಶೇಷ ಚೇತನರಿಗಾಗಿ ಆನಂದವನ ಆಶ್ರಮವನ್ನು ಸ್ಥಾಪಿಸಿದ್ದರು. ಕೃಷ್ಣ ಎಲ್ಲ ಅವರು ಬಾಬಾ ಆಮ್ಟೆ ಅವರ ಮಹಾರೋಗಿ ಸೇವಾ ಸಮಿತಿಯ ಅಡಿಯಲ್ಲಿ ಸ್ಥಾಪಿಸಲಾಗುತ್ತಿದ್ದ ಆನಂದ ನಿಕೇತನ್ ಕೃಷಿ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. 1973 ರಲ್ಲಿ ಕೃಷ್ಣ ಎಲ್ಲ ಈ ಕಾಲೇಜಿನಲ್ಲಿ ಬಿಎಸ್ಸಿ ಕೋರ್ಸ್ಗೆ ಸೇರಿದ್ದರು.