ತಿರುವನಂತಪುರಂ(ಕೇರಳ):ಬಡವರು ಮತ್ತು ನಿರ್ಗತಿಕರಿಗೆ ಆಹಾರ ನೀಡುವ ಉದ್ದೇಶದಿಂದ ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಶಬರಿಮಲೆ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಕೃಷ್ಣ ಎಲ್ಲ, ಪತ್ನಿ ಸುಚಿತ್ರಾ ಎಲ್ಲ ಸೇರಿದಂತೆ ಕುಟುಂಬ ಸಮೇತವಾಗಿ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನದ ಬಳಿಕ ಶಬರಿಮಲೆ ಕಾರ್ಯನಿರ್ವಾಹಕ ಅಧಿಕಾರಿ ವಿ ಕೃಷ್ಣಕುಮಾರ್ ವೇರಿಯಲ್ ಅವರಿಗೆ ಹಣವನ್ನ ಆನ್ಲೈನ್ ಮೂಲಕ ವರ್ಗಾಯಿಸಲಾಗಿದೆ.