ಕರ್ನಾಟಕ

karnataka

ETV Bharat / bharat

ಕೋವ್ಯಾಕ್ಸಿನ್‌ನ ಔಷಧ ಪದಾರ್ಥ ತಯಾರಿಕೆಗೆ ಭಾರತ್ ಬಯೋಟೆಕ್, ಜಿಸಿವಿಸಿ ತಿಳುವಳಿಕೆ ಪತ್ರಕ್ಕೆ ಸಹಿ

ಕೋವ್ಯಾಕ್ಸಿನ್‌ ಔಷಧ ವಸ್ತು ತಯಾರಿಕೆಗಾಗಿ ಹೆಸ್ಟರ್ ತನ್ನ ಗುಜರಾತ್ ಸ್ಥಾವರದಲ್ಲಿ ಸಂಪೂರ್ಣ ಮೂಲಸೌಕರ್ಯವನ್ನು ಒದಗಿಸಬೇಕು ಮತ್ತು Omnibrx ತಂತ್ರಜ್ಞಾನ ಬೆಂಬಲ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ ಎಂದು ಫೈಲಿಂಗ್ ತಿಳಿಸಿದೆ..

biotech
biotech

By

Published : May 28, 2021, 4:22 PM IST

ನವದೆಹಲಿ : ಕೋವಿಡ್​ ಲಸಿಕೆ ತಯಾರಕ ಭಾರತ್ ಬಯೋಟೆಕ್ ಮತ್ತು ಗುಜರಾತ್ ಕೋವಿಡ್ ಲಸಿಕೆ ಒಕ್ಕೂಟ (ಜಿಸಿವಿಸಿ) ನಡುವೆ ಕೋವ್ಯಾಕ್ಸಿನ್‌ ಔಷಧಿ ತಯಾರಿಕಾ ಪದಾರ್ಥ ತಯಾರಿಸುವ ಗುತ್ತಿಗೆ ಕುರಿತ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ಹೆಸ್ಟರ್ ಬಯೋಸೈನ್ಸ್ ಗುರುವಾರ ತಿಳಿಸಿದೆ.

ಜಿಸಿವಿಸಿ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ (ಜಿಬಿಆರ್​​ಸಿ), ಹೆಸ್ಟರ್ ಬಯೋಸೈನ್ಸ್ ಮತ್ತು Omnibrx ಬಯೋಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಒಳಗೊಂಡಿದೆ ಎಂದು ಹೆಸ್ಟರ್ ಬಯೋಸೈನ್ಸ್ ತಿಳಿಸಿದೆ.

ಒಪ್ಪಂದದ ಪ್ರಕಾರ, ಭಾರತ್ ಬಯೋಟೆಕ್ ಕೋವ್ಯಾಕ್ಸಿನ್‌ಗೆ ಲಸಿಕೆ ಉತ್ಪಾದಿಸುವ ತಂತ್ರಜ್ಞಾನವನ್ನು ಒದಗಿಸುತ್ತದೆ ಮತ್ತು ಜಿಬಿಆರ್‌ಸಿ ಸಲಹೆಗಾರ ಮತ್ತು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತ್ ಬಯೋಟೆಕ್‌ನಿಂದ ತಂತ್ರಜ್ಞಾನ ವರ್ಗಾವಣೆಗೆ ಅನುಕೂಲವಾಗಲಿದೆ ಎಂದು ಅದು ಹೇಳಿದೆ.

ಕೋವ್ಯಾಕ್ಸಿನ್‌ ಔಷಧ ವಸ್ತು ತಯಾರಿಕೆಗಾಗಿ ಹೆಸ್ಟರ್ ತನ್ನ ಗುಜರಾತ್ ಸ್ಥಾವರದಲ್ಲಿ ಸಂಪೂರ್ಣ ಮೂಲಸೌಕರ್ಯವನ್ನು ಒದಗಿಸಬೇಕು ಮತ್ತು Omnibrx ತಂತ್ರಜ್ಞಾನ ಬೆಂಬಲ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ ಎಂದು ಫೈಲಿಂಗ್ ತಿಳಿಸಿದೆ.

"ಎಲ್ಲವೂ ವೇಳಾಪಟ್ಟಿಯ ಪ್ರಕಾರ ನಡೆದರೆ, ಆಗಸ್ಟ್ 2021ರಿಂದ ಔಷಧ ಪದಾರ್ಥವು ಲಭ್ಯವಿರುತ್ತದೆ, ಇದನ್ನು ಕೋವ್ಯಾಕ್ಸಿನ್‌ ಉತ್ಪಾದಿಸಲು ಭಾರತ್ ಬಯೋಟೆಕ್‌ಗೆ ಸರಬರಾಜು ಮಾಡಲಾಗುತ್ತದೆ" ಎಂದು ಅದು ಹೇಳಿದೆ. ಈ ಯೋಜನೆಗಾಗಿ ಹೆಸ್ಟರ್ 40 ಕೋಟಿ ರೂ. ಬಂಡವಾಳವನ್ನು ಅಂದಾಜಿಸಿದೆ.

ABOUT THE AUTHOR

...view details