ನವದೆಹಲಿ:ಸ್ವದೇಶಿ ಲಸಿಕೆಯಾದ ಭಾರತ್ ಬಯೋಟೆಕ್ ಕಂಪನಿಯ ಕೊವ್ಯಾಕ್ಸಿನ್ಗೆ ಇದೀಗ ಬೆಲೆ ನಿಗದಿ ಮಾಡಲಾಗಿದ್ದು, ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ಗೆ ನೀಡಲು ನಿರ್ಧರಿಸಲಾಗಿದೆ.
ಕೊವ್ಯಾಕ್ಸಿನ್ ಬೆಲೆ ನಿಗದಿ: ಖಾಸಗಿ ಆಸ್ಪತ್ರೆಗೆ 1,200 ರೂ., ರಾಜ್ಯ ಸರ್ಕಾರಗಳಿಗೆ 600 ರೂ.! - Covaxin cost
ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ರಾಮಬಾಣವಾಗಿರುವ ಕೊವ್ಯಾಕ್ಸಿನ್ ಬೆಲೆ ಇದೀಗ ನಿಗದಿಯಾಗಿದೆ.
COVAXIN
ಇದಕ್ಕೆ ಸಂಬಂಧಿಸಿದಂತೆ ಭಾರತ್ ಬಯೋಟೆಕ್ ಕಂಪನಿ ಮಹತ್ವದ ಪ್ರಕಟಣೆ ಹೊರಡಿಸಿದ್ದು, ವಿದೇಶಗಳಿಗೆ 15ರಿಂದ 20 ಡಾಲರ್ಗೆ ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ.
ಈಗಾಗಲೇ ಸೆರಂನ ಕೊವಿಶೀಲ್ಡ್ ವ್ಯಾಕ್ಸಿನ್ ಬೆಲೆ ನಿಗದಿಯಾಗಿದ್ದು, ರಾಜ್ಯ ಸರ್ಕಾರಗಳಿಗೆ 400 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ಪ್ರತಿ ಡೋಸ್ ಮಾರಾಟ ಮಾಡುವುದಾಗಿ ಹೇಳಿಕೊಂಡಿದೆ.