ನವದೆಹಲಿ: ವಿಶ್ವವ್ಯಾಪಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಹೊಸ ಹೊಸ ವೈದ್ಯಕೀಯ ಪ್ರಯೋಗಗಳು ನಡೆಯುತ್ತಿವೆ. ಇದೇ ಮೊದಲ ಬಾರಿಗೆ ಮೂಗಿನ ಮೂಲಕ ಕೋವಿಡ್ ಲಸಿಕೆ ನೀಡುವ ಸಂಶೋಧನೆಯಲ್ಲಿ ಭಾರತ್ ಬಯೋಟೆಕ್ ಒಂದು ಹೆಜ್ಜೆ ಮುಂದಿಟ್ಟಿದೆ.
'ಕೋವಿಡ್-19 ಮೂಗಿನ ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿದ್ದೇವೆ. ಇದೀಗ ಅಂಕಿ-ಅಂಶಗಳ ವಿಶ್ಲೇಷಣೆ ನಡೆಯುತ್ತಿದೆ. ಮುಂದಿನ ತಿಂಗಳ ಹೊತ್ತಿಗೆ ಅಂತಿಮ ವರದಿಯನ್ನು ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಪ್ರಾಧಿಕಾರವು ಅನುಮತಿ ನೀಡಿದ ನಂತರ ಅಧಿಕೃತವಾಗಿ ಲಸಿಕೆ ಬಿಡುಗಡೆ ಮಾಡಲಾಗುತ್ತದೆ. ಇದು ಜಗತ್ತಿನ ಮೊದಲ ನಾಸಿಕದ ಮೂಲಕ ನೀಡುವ ಕೋವಿಡ್ ಲಸಿಕೆ ಆಗಲಿದೆ' ಎಂದು ಭಾರತ್ ಬಯೋಟೆಕ್‌ನ ಅಧ್ಯಕ್ಷ ಡಾ.ಕೃಷ್ಣ ಎಲಾ ಹೇಳಿದರು.