ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಕಳೆದ ನಾಲ್ಕು ತಿಂಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಅದರ ಭಾಗವಾಗಿ ಇಂದು ದೇಶಾದ್ಯಂತ ಭಾರತ್ ಬಂದ್ಗೆ ಕರೆ ನೀಡಲಾಗಿದೆ.
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 4 ತಿಂಗಳು ಪೂರೈಕೆ ಮಾಡುತ್ತಿರುವ ಕಾರಣ ಈ ಬಂದ್ಗೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲೂ ಇದರ ಬಿಸಿ ತಟ್ಟಲಿದೆ. ಪ್ರಮುಖವಾಗಿ ದೆಹಲಿಯ ಸಿಂಘು, ಗಾಜಿಪುರ್ ಮತ್ತು ಟಿಕ್ರಿ ಗಡಿಯಲ್ಲಿ ಹೆಚ್ಚಿನ ರೈತರು ಸೇರಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಥೇಲಿಯಂ ವಿಷ ಬೆರೆಸಿ ಪತ್ನಿ, ಆಕೆಯ ಕುಟುಂಬಕ್ಕೆ ನೀಡಿದ ಉದ್ಯಮಿ: ಅತ್ತೆ,ನಾದಿನಿ ಸಾವು, ಪತ್ನಿ ಕೋಮಾದಲ್ಲಿ!
ಸಂಯುಕ್ತ ಕಿಸಾನ್ ಮೋರ್ಚ್ ಈ ಬಂದ್ ಮುಂದಾಳತ್ವವಹಿಸಿದ್ದು, ವಿವಿಧ ಸಂಘಟನೆಗಳು ಸಹ ಇದರಲ್ಲಿ ಭಾಗಿಯಾಗುತ್ತಿವೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ನಡೆಯಲಿದ್ದು, ಪ್ರಮುಖ ಸೇವೆಗಳು ಬಂದ್ ಆಗುವ ಎಲ್ಲ ಲಕ್ಷಣ ಗೋಚರಿಸುತ್ತಿವೆ. ಪ್ರಮುಖವಾಗಿ ರೈಲು ಸಂಚಾರ, ಬಸ್ ಸೇವೆ ಹಾಗೂ ಮಾರುಕಟ್ಟೆ ಬಂದ್ ಆಗುವುದು ಬಹುತೇಕ ಖಚಿತವಾಗಿದ್ದು, ಕೆಲವೊಂದು ಸಾರ್ವಜನಿಕ ಸ್ಥಳಗಳು ಬಂದ್ ಆಗಿರಲಿವೆ. ಆದರೆ ಆರೋಗ್ಯ ಸೇರಿ ಪ್ರಮುಖ ತುರ್ತು ಸೇವೆ ಕಾರ್ಯನಿರ್ವಹಿಸಲಿವೆ.
ಬಂದ್ಗೆ ವಿವಿಧ ಕಾರ್ಮಿಕ ಸಂಘಟನೆ, ಸಾರಿಗೆ ಹಾಗೂ ವಿವಿಧ ಒಕ್ಕೂಟಗಳು ಬೆಂಬಲ ಸೂಚಿಸಿದ್ದು, ಕರ್ನಾಟಕದಲ್ಲೂ ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆ ನಡೆಸಲಾಗುವುದು ಎಂದು ಕುರುಬುರು ಶಾಂತಕುಮಾರ್ ಈಗಾಗಲೇ ತಿಳಿಸಿದ್ದಾರೆ. ಆದರೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಬಂದ್ ನಡೆಸದಂತೆ ಸೂಚನೆ ನೀಡಲಾಗಿದೆ.
ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್
ಲಭ್ಯವಾಗಿರುವ ಮಾಹಿತಿ ಪ್ರಕಾರ ಸಂಯುಕ್ತ ಕಿಸಾನ್ ಮೋರ್ಚಾ ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಭಾರತ್ ಬಂದ್ಗೆ ಕರೆ ನೀಡಿದ್ದು, ಈ ವೇಳೆ ರಸ್ತೆ ಮತ್ತು ರೈಲು ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ಬ್ಯಾಂಕಿಂಗ್ ಸೇವೆಗಳು ಬಂದ್ ಇರಲಿದ್ದು, ಇದರಿಂದ ಜನಸಾಮಾನ್ಯರಿಗೆ ತಲೆನೀವಾಗಲಿದೆ.