ಕರ್ನಾಟಕ

karnataka

ETV Bharat / bharat

ಭಾರತ್​ ಬಂದ್ ​: ದೆಹಲಿ ಟಿಕ್ರಿ ಗಡಿ ಬಳಿ ಮೆಟ್ರೋ ಬಂದ್​, ರೈಲ್ವೆ ಇಲಾಖೆಯಿಂದ ರೈಲು ಬಂದ್​!

ಇಂದಿನ ಭಾರತ್​ ಬಂದ್​ಗೆ 500ಕ್ಕೂ ಅಧಿಕ ಸಂಘಟನೆಗಳು, 15 ಕಾರ್ಮಿಕ ಸಂಘಟನೆ, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ದೆಹಲಿ ಗಡಿಯ ಗುರುಗಾಂವ್​, ನೋಯ್ಡಾ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಂಡು ಬಂದಿದ್ದು, ಉತ್ತರಪ್ರದೇಶದಿಂದ ಗಾಜಿಪುರ್​ಗೆ ತೆರಳುವ ಸಂಚಾರದಲ್ಲೂ ಅಸ್ತವ್ಯಸ್ಥವಾಯಿತು..

Bharat Bandh
Bharat Bandh

By

Published : Sep 27, 2021, 4:16 PM IST

ನವದೆಹಲಿ :ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರು ದೇಶಾದ್ಯಂತ ಭಾರತ್​ ಬಂದ್​ಗೆ ಕರೆ ನೀಡಿದ್ದಾರೆ. ಆದರೆ, ನೀರಸ ಪ್ರಕ್ರಿಯೆ ವ್ಯಕ್ತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿ ಮೆಟ್ರೋ ರೈಲು ನಿಗಮ ಪಂಡಿತ್​ ರಾಮ್​ ಶರ್ಮಾ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರ ಬಂದ್ ಮಾಡಿದೆ. ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ಹರಿಯಾಣ-ದೆಹಲಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮಕೈಗೊಳ್ಳಲಾಗಿತ್ತು. ಇದರ ಜೊತೆಗೆ ದೆಹಲಿಯಿಂದ ಕತ್ರಾಗೆ ತೆರಳುವ ವಂದೇ ಭಾರತ್ ಎಕ್ಸ್​ಪ್ರೆಸ್​​ ರೈಲು ಸೇರಿ ಅನೇಕ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಉತ್ತರ ಪ್ರದೇಶ-ದೆಹಲಿ ಮಾರ್ಗದಲ್ಲಿ ಸಂಚಾರ ದಟ್ಟಣೆ

ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ದೆಹಲಿಯ ಗಡಿ ಭಾಗಗಳಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುವಂತಾಯಿತು.

ಇಂದಿನ ಭಾರತ್​ ಬಂದ್​ಗೆ 500ಕ್ಕೂ ಅಧಿಕ ಸಂಘಟನೆಗಳು, 15 ಕಾರ್ಮಿಕ ಸಂಘಟನೆ, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ದೆಹಲಿ ಗಡಿಯ ಗುರುಗಾಂವ್​, ನೋಯ್ಡಾ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಂಡು ಬಂದಿದ್ದು, ಉತ್ತರಪ್ರದೇಶದಿಂದ ಗಾಜಿಪುರ್​ಗೆ ತೆರಳುವ ಸಂಚಾರದಲ್ಲೂ ಅಸ್ತವ್ಯಸ್ಥವಾಯಿತು.

ಇದನ್ನೂ ಓದಿರಿ:ಗರ್ಭಿಣಿ ಮೇಲೆ ಅತ್ಯಾಚಾರವೆಸಗಿದ ಕಾಮುಕರು, ರೈಲ್ವೆ ಟ್ರ್ಯಾಕ್​ ಮೇಲೆ ಎಸೆದು ಪರಾರಿ

ತಮಿಳುನಾಡಿನ ಚೆನ್ನೈನ ಅಣ್ಣಾ ಸಲೈ ಪ್ರದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಸಂಘರ್ಷ ನಡೆದಿದೆ. ರೈತರ ಹೋರಾಟಕ್ಕೆ ಪ್ರಮುಖವಾಗಿ ತಮಿಳುನಾಡು, ಛತ್ತೀಸ್​​ಗಢ, ಕೇರಳ, ಪಂಜಾಬ್​, ಜಾರ್ಖಂಡ್​​​ ಹಾಗೂ ಆಂಧ್ರಪ್ರದೇಶ ಸರ್ಕಾರದಿಂದಲೂ ಬೆಂಬಲ ವ್ಯಕ್ತವಾಗಿದೆ.

ABOUT THE AUTHOR

...view details