ಚಂಡೀಗಢ(ಪಂಜಾಬ್):ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಮತ್ತು ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಭಗವಂತ್ ಮಾನ್ ಗೆಲುವು ಸಾಧಿಸಿದ್ದು, ಇವರ ವಿರುದ್ಧ ಕಾಂಗ್ರೆಸ್ ಶಾಸಕ ದಲ್ಬೀರ್ ಗೋಲ್ಡಿ ಸ್ಪರ್ಧಿಸಿದ್ದರು.
ಈ ಮೊದಲು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಭಗವಂತ್ ಮಾನ್, ಈಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಅವರು ದೇಶದಲ್ಲಿ ಆಪ್ ಪಕ್ಷದ ಪರವಾಗಿ ಸಂಸತ್ ಸ್ಥಾನವನ್ನು ಗೆದ್ದ ಏಕೈಕ ಸಂಸದರು ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಇದನ್ನೂ ಓದಿ:ಕೇಜ್ರಿವಾಲ್ ಮಾದರಿ ಆಡಳಿತವನ್ನು ಪಂಜಾಬ್ ಜನ ಒಪ್ಪಿಕೊಂಡಿದ್ದಾರೆ.. ಮನೀಶ್ ಸಿಸೋಡಿಯಾ
ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಭಗವಂತ್ ಮಾನ್ ಅವರನ್ನು ಸಿಎಂ ಅಭ್ಯರ್ಥಿಯನ್ನಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ್ದರು. ಭಗವಂತ್ ಮಾನ್ ರಾಜಕಾರಣಕ್ಕೆ ಬರುವ ಮೊದಲು ಟಿವಿಯಲ್ಲಿ ಹಾಸ್ಯ ನಟರಾಗಿ ಕಾಣಿಸಿಕೊಳ್ಳುತ್ತಿದ್ದರು.
ಈಗಿನ ಟ್ರೆಂಡ್ನಂತೆ ಪಂಜಾಬ್ನಲ್ಲಿ 91 ಕ್ಷೇತ್ರಗಳಲ್ಲಿ ಆಪ್ , 18 ಕ್ಷೇತ್ರಗಳಲ್ಲಿ ಕಾಂಗ್ರೆಸ್, 5 ಕ್ಷೇತ್ರಗಳಲ್ಲಿ ಶಿರೋಮಣಿ ಅಕಾಲಿದಳ ಮುನ್ನಡೆ ಸಾಧಿಸಿವೆ.