ಹೈದರಾಬಾದ್: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಗಳಿಸುತ್ತಿರುವ ಬಿಎಫ್.7 ಕೋವಿಡ್ ವೆರಿಯಂಟ್ ಭಾರತೀಯರಲ್ಲೂ ಆತಂಕ ಮೂಡಿಸಿದೆ. ಇಲ್ಲಿಯವರೆಗೆ ಕೇವಲ ನಾಲ್ಕು ಪ್ರಕರಣಗಳು ವರದಿಯಾಗಿದ್ದರೂ, ಭಾರತ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿಂದೆ ಡೆಲ್ಟಾ ಮತ್ತು ಓಮಿಕ್ರಾನ್‌ನಂತಹ ರೂಪಾಂತರಗಳನ್ನು ಯಶಸ್ವಿಯಾಗಿ ಎದುರಿಸಿದ್ದರೂ ಅಧಿಕಾರಿಗಳು ಈ ರೂಪಾಂತರದ ಬಗ್ಗೆ ಏಕೆ ಚಿಂತೆಗೀಡಾಗಿದ್ದಾರೆ ಎಂಬುದನ್ನು ತಿಳಿಯುವುದು ಅಗತ್ಯ.
ಉಸಿರಾಟ ಸಮಸ್ಯೆ ಸೃಷ್ಟಿಸುತ್ತೆ:BF.7 ಮುಖ್ಯವಾಗಿ ಎದೆಯ ಮೇಲ್ಭಾಗದಲ್ಲಿ ಉಸಿರಾಟದ ಸಮಸ್ಯೆ ಸೃಷ್ಟಿಸುತ್ತದೆ. ಅಂದರೆ ಇದು ಮೇಲಿನ ಎದೆ ಮತ್ತು ಗಂಟಲಿನಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಇವುಗಳಲ್ಲದೆ ಜ್ವರ, ನೆಗಡಿ ಕಾಡಬಹುದು. ಉಸಿರಾಟದ ತೊಂದರೆಗಳು ಉಲ್ಬಣಗೊಳ್ಳುವುದರಿಂದ, ಅದರಿಂದಾಗಿಯೇ ವ್ಯಕ್ತಿಯು ಸಾಯುವ ಸಾಧ್ಯತೆಗಳು ಹೆಚ್ಚು. ಕೆಲವರಿಗೆ ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರದಂಥ ರೋಗಲಕ್ಷಣಗಳು ಕಾಣಿಸಬಹುದು. ಈ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಇದರಿಂದ ವೈರಸ್ ಹರಡುವುದನ್ನು ತಡೆಯಬಹುದು.
ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳ ಸರಾಸರಿ ಸಂಖ್ಯೆ 200 ಕ್ಕಿಂತ ಕಡಿಮೆಯಾಗಿದೆ. ಜುಲೈ ಮತ್ತು ಅಕ್ಟೋಬರ್ 2022 ರ ನಡುವೆ BF.7 ನ ನಾಲ್ಕು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇವುಗಳಲ್ಲಿ ಮೂರು ಗುಜರಾತ್‌ನಲ್ಲಿ ಮತ್ತು ಒಂದು ಪ್ರಕರಣ ಒಡಿಶಾದಲ್ಲಿ ಕಂಡುಬಂದಿವೆ. ಈ ನಾಲ್ಕೂ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
BF 7 ನ ತೀವ್ರತೆ ತುಂಬಾ ಕಡಿಮೆ.. ಆದರೆ?:ಹಿಂದಿನ ರೂಪಾಂತರಗಳಿಗೆ ಹೋಲಿಸಿದರೆ, BF.7 ನ ತೀವ್ರತೆ ತುಂಬಾ ಕಡಿಮೆಯಾಗಿದೆ. ಆದರೆ ಅದರ ಹೆಚ್ಚಿನ ಪ್ರಮಾಣದ ಹರಡುವಿಕೆಯಿಂದಾಗಿ, ಹೆಚ್ಚಿನ ಜನ ಈ ವೈರಸ್‌ಗೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳುತ್ತಾರೆ. ಇದು ಭಾರತವನ್ನು ಪ್ರವೇಶಿಸಿದರೆ, ಇದುವರೆಗೆ ಎದುರಿಸಿದ ರೂಪಾಂತರಗಳಿಗಿಂತ ಹೆಚ್ಚು ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ಮೇಲಾಗಿ ಸಂತ್ರಸ್ತರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.