ಕರ್ನಾಟಕ

karnataka

ETV Bharat / bharat

ಬಿಎಫ್ 7 ವೈರಾಣು: ಭಾರತಕ್ಕೆ ಮುಂದಿನ 30 ದಿನ ನಿರ್ಣಾಯಕ- ಕೇಂದ್ರ ಆರೋಗ್ಯ ಸಚಿವ - ಕೋವಿಡ್ ಆತಂಕ

ಕೋವಿಡ್​ ಹೊಸ ರೂಪಾಂತರವಾದ ಬಿಎಫ್.7 ವೈರಾಣು ಸಾಕಷ್ಟು ಆತಂಕ ಸೃಷ್ಟಿಸಿದೆ. ಚೀನಾ ಮತ್ತು ಇತರ ರಾಷ್ಟ್ರಗಳಲ್ಲಿ ವೇಗವಾಗಿ ಈ ಸೋಂಕು ಹರಡುತ್ತಿದ್ದು, ಭಾರತಕ್ಕೆ ಮುಂದಿನ 30 ದಿನಗಳು ನಿರ್ಣಾಯಕವಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

BF.7 variant scare: Next 30 days crucial but masks not mandatory, says Health Minister Mandaviya
ಬಿಎಫ್ 7 ವೈರಾಣು: ಭಾರತಕ್ಕೆ ಮುಂದಿನ 30 ದಿನಗಳು ನಿರ್ಣಾಯಕ ಎಂದ ಕೇಂದ್ರ ಆರೋಗ್ಯ ಸಚಿವ

By

Published : Dec 28, 2022, 6:41 PM IST

ನವದೆಹಲಿ: ದೇಶದಲ್ಲಿ ಕೋವಿಡ್​ ಸೋಂಕಿನ ಬಿಎಫ್.7 ರೂಪಾಂತರದ ಭೀತಿ ಹೆಚ್ಚಾಗಿರುವ ನಡುವೆ ಈ ವೈರಾಣು ಕುರಿತಾಗಿ ಮುಂದಿನ ಒಂದು ತಿಂಗಳು ನಿರ್ಣಾಯಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ರೂಪಾಂತರವು ಭಾರತಕ್ಕೂ ಕಾಲಿಡಬಹುದು ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಕೋವಿಡ್​ನ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಆದರೆ, ಮಾಸ್ಕ್ ಧರಿಸುವುದು ಇನ್ನೂ ಕಡ್ಡಾಯ ಮಾಡಿಲ್ಲ ಎಂದೂ ತಿಳಿಸಿದರು.

ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ದೇಶಗಳಿಂದ ಬಂದ ಆರು ಸಾವಿರ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ 38 ಜನರಿಗೆ ಪಾಸಿಟಿವ್ ಸೋಂಕು ಕಂಡುಬಂದಿದೆ. ಅದರಲ್ಲೂ, ಬಿಎಫ್​.7 ರೂಪಾಂತರದ ಸೋಂಕು ನಿಯಂತ್ರಣ ಮತ್ತು ಪರಿಣಾಮಕಾರಿ ಲಸಿಕೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಇಯರ್ ಎಂಡ್ ಸಂಭ್ರಮಾಚರಣೆಗೆಂದು ಕೊಡಗಿನತ್ತ ಪ್ರವಾಸಿಗರ ಚಿತ್ತ: ಪ್ರವಾಸಿ ಸ್ಥಳಗಳಲ್ಲಿ ಕಟ್ಟೆಚ್ಚರ

ABOUT THE AUTHOR

...view details