ತಿರುವನಂತಪುರಂ(ಕೇರಳ): Honey trapping caseಕಳೆದ ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚೆಚ್ಚು ಸುದ್ದಿಯಲ್ಲಿವೆ. ಇದರ ಮೂಲಕ ತೊಂದರೆಗೊಳಗಾಗಿ ಅನೇಕರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಇದೀಗ ಇಂತಹದ್ದೇ ಮತ್ತೊಂದು ಪ್ರಕರಣ ಕೇರಳದಲ್ಲಿ ನಡೆದಿದೆ.
ಇಡೀ ಪ್ರಕರಣದ ವಿವರ:
ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಫೇಸ್ಬುಕ್ನಲ್ಲಿ ಅಪರಿಚಿತ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್(Friend Request) ಬಂದಿತ್ತು. ಅದನ್ನು ಒಪ್ಪಿಕೊಳ್ಳುತ್ತಿದ್ದಂತೆ ಯುವತಿ ತಾನು ತನ್ನ ಹೆಸರು ಪರಿಚಯ ಮಾಡಿಕೊಂಡಿದ್ದಳು. ತಾನು ಮುಂಬೈನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವುದಾಗಿಯೂ ಹೇಳಿದ್ದಳು. ಇದಾದ ಬಳಿಕ ಇಬ್ಬರೂ ಪರಸ್ಪರ ವಾಟ್ಸ್ಆ್ಯಪ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಪರಸ್ಪರ ಸಲುಗೆ ಹೆಚ್ಚಾದಂತೆ ವಿಡಿಯೋ ಕಾಲ್ ಮಾಡಲು ಪ್ರಾರಂಭಿಸಿದ್ದಾರೆ.
ವಿಡಿಯೋ ಕಾಲ್ ಮಾಡಿರುವ ಸಂದರ್ಭದಲ್ಲಿ ಮಹಿಳೆ ತಕ್ಷಣವೇ ವಾಶ್ ರೂಂಗೆ ಬಂದು ಹಾಕಿಕೊಂಡಿರುವ ಬಟ್ಟೆ ಕಳಚಿ ನಗ್ನಳಾಗುತ್ತಾಳೆ. ಇದಾದ ಬಳಿಕ ವರದಿಗಾರನಿಗೂ ಬಟ್ಟೆ ತೆಗೆದು ನಗ್ನವಾಗಿ ಕಾಣಿಸಿಕೊಳ್ಳುವಂತೆ ಪ್ರಚೋದಿಸುತ್ತಾಳೆ. ಅದಕ್ಕೆ ನಿರಾಕರಿಸಿದಾಗ ತಕ್ಷಣವೇ ವಿಡಿಯೋ ಕಾಲ್ ಆಫ್ ಆಗುತ್ತೆ. ಇದಾದ ಕೆಲವೇ ನಿಮಿಷಗಳ ಬಳಿಕ ಒಂದು ವಾಟ್ಸ್‌ಆ್ಯಪ್‌ಗೆ ಮೆಸೇಜ್ ಬರುತ್ತೆ. ನೀನು ನಾನು ಕೇಳಿದಷ್ಟು ಹಣ ನೀಡದಿದ್ದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಬೆದರಿಕೆ ಹಾಕುತ್ತಾಳೆ.
ಹೀಗೆ ಬ್ಲ್ಯಾಕ್ ಮೇಲ್(Blackmail) ಮಾಡುತ್ತಿದ್ದಂತೆ ಪೊಲೀಸರಿಗೆ ವರದಿಗಾರ ಲಿಖಿತ ದೂರು ನೀಡಿದ್ದಾರೆ. ಯುವತಿಯ ಮೊಬೈಲ್ ನಂಬರ್ ಆಧರಿಸಿ ಆಕೆ ಇರುವ ಸ್ಥಳ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾದರು. ಈ ವೇಳೆ ಆರೋಪಿತೆ ಅಸ್ಸೋಂ ಮೂಲದ 'ಅಕ್ಲಿಮಾ ಬೇಗಂ' ಎಂಬ ಹೆಸರಿನಲ್ಲಿ ಸಿಮ್ ತೆಗೆದುಕೊಂಡಿರುವುದು ಗೊತ್ತಾಗಿದೆ. ಈ ಪ್ರಕರಣ ಬೆನ್ನತ್ತಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇದೇ ವೇಳೆ ಇಂತಹ ಮೋಸದ ಜಾಲಗಳಿಗೆ ಒಳಗಾಗದಂತೆ ಜನರಿಗೆ ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.