ಕರ್ನಾಟಕ

karnataka

ETV Bharat / bharat

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಗೆ ಹಲ್ಲೆ: ಮುಖಕ್ಕೆ ಮಸಿ, ಚಪ್ಪಲಿ ಹಾರ ಹಾಕಿ ಚಿತ್ರಹಿಂಸೆ - ಈಟಿವಿ ಭಾರತ ಕನ್ನಡ

ಮಧ್ಯಪ್ರದೇಶದ ಬೆತುಲ್​ ಜಿಲ್ಲೆಯ ದಾಮ್‌ಜಿಪುರದ ಬುಡಕಟ್ಟು ಕಲ್ಯಾಣ ಇಲಾಖೆಯ ಕಸ್ತೂರಬಾ ಗಾಂಧಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಕಳ್ಳತನ ಆರೋಪ ಹೊರಿಸಿ ವಿದ್ಯಾರ್ಥಿನಿಗೆ ಥಳಿಸಿರುವ ಘಟನೆ ನಡೆದಿದೆ.

betul-talibani-punishment-betul-girl-students-thrashed-in-hostel-betul-girl-student-accused-of-theft-students-walk-in-rooms-wearing-garlands
ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಗೆ ಹಲ್ಲೆ : ಮುಖಕ್ಕೆ ಮಸಿ, ಚಪ್ಪಲಿ ಹಾರ ಹಾಕಿ ಚಿತ್ರಹಿಂಸೆ

By

Published : Dec 7, 2022, 9:08 PM IST

ಬೆತುಲ್‌(ಮಧ್ಯಪ್ರದೇಶ): ಐದನೇ ತರಗತಿ ವಿದ್ಯಾರ್ಥಿನಿಗೆ ಕಳ್ಳತನದ ಆರೋಪದ ಮೇಲೆ ಥಳಿಸಿ ಬಳಿಕ ಮುಖಕ್ಕೆ ಕಪ್ಪು ಬಣ್ಣ ಬಳಿದು ಚಪ್ಪಲಿ ಹಾರ ಹಾಕಿರುವ ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ. ಇಲ್ಲಿನ ದಾಮ್‌ಜಿಪುರದ ಬುಡಕಟ್ಟು ಕಲ್ಯಾಣ ಇಲಾಖೆಯ ಕಸ್ತೂರಬಾ ಗಾಂಧಿ ಬಾಲಕಿಯರ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧ ಕೊರಕು ಸಮಾಜ ಸಂಘಟನೆ ಹಾಗೂ ಬಾಲಕಿಯ ಕುಟುಂಬಸ್ಥರು ಜಿಲ್ಲಾಧಿಕಾರಿ ಅಮನ್‌ವೀರ್ ಸಿಂಗ್ ಬೈನ್ಸ್ ಅವರಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತಂದೆ ಭೇಟಿಯಾಗಲು ಬಂದಾಗ ಘಟನೆ ಬೆಳಕಿಗೆ: ಸಂತ್ರಸ್ತ ವಿದ್ಯಾರ್ಥಿನಿಯನ್ನು ಆಕೆಯ ತಂದೆ ಭೇಟಿ ಮಾಡಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯು ತನ್ನ ತಂದೆಯಲ್ಲಿ, 400 ರೂಪಾಯಿ ಕಳ್ಳತನದ ಆರೋಪ ಹೊರಿಸಿ ನನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಿದ್ದಾಳೆ. ಘಟನೆ ಸಂಬಂಧ ಹಾಸ್ಟೆಲ್ ಅಧೀಕ್ಷಕರಲ್ಲಿ ಕೇಳಿದಾಗ ಘಟನೆ ಬಗ್ಗೆ ಒಪ್ಪಿಕೊಂಡಿದ್ದು, ಇನ್ನು ಮುಂದೆ ಇದು ಪುನರಾವರ್ತನೆಯಾಗುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ವಿದ್ಯಾರ್ಥಿನಿ, ಕಳೆದ ಭಾನುವಾರ ಈ ಘಟನೆ ನಡೆದಿದೆ. ಹಾಸ್ಟೆಲ್ ಸೂಪರಿಂಟೆಂಡೆಂಟ್ ಸುನಿತಾ ಉಯಿಕೆ ಐವರು ವಿದ್ಯಾರ್ಥಿನಿಯರ ಮೇಲೆ ಕಳ್ಳತನದ ಆರೋಪ ಮಾಡಿದ್ದಾರೆ. ಬಳಿಕ ಸೂಪರಿಂಟೆಂಡೆಂಟ್ ನನಗೆ ಶೂ ಮತ್ತು ಚಪ್ಪಲಿಗಳ ಮಾಲೆ ಹಾಕಿದರು. ಬಳಿಕ ಹಾಸ್ಟೆಲ್‌ನ ಎಲ್ಲಾ ಕೊಠಡಿಗಳಿಗೆ ಕರೆದುಕೊಂಡು ಹೋದರು. ಬಳಿಕ ನೃತ್ಯ ಮಾಡುವಂತೆ ಹೇಳಿದರು. ನೃತ್ಯ ಮಾಡಲು ನಿರಾಕರಿಸಿದಾಗ, ಅವರು ಮತ್ತೆ ಹೊಡೆದರು ಎಂದು ಹೇಳಿದ್ದಾಳೆ.

ನಾವು ಏನನ್ನೂ ಕದಿಯಲಿಲ್ಲ, ಆದರೂ ನಮಗೆ ಚಿತ್ರಹಿಂಸೆ ನೀಡಿದ್ದಾರೆ. ನಾನು ಇನ್ನು ಮುಂದೆ ಹಾಸ್ಟೆಲ್‌ಗೆ ಹೋಗುವುದಿಲ್ಲ. ಈ ಬಗ್ಗೆ ಮನೆಯಲ್ಲಿ ದೂರು ನೀಡಿದರೆ ಮತ್ತಷ್ಟು ಥಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಒಟ್ಟು ಐವರು ವಿದ್ಯಾರ್ಥಿನಿಗಳಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಇದನ್ನೂ ಓದಿ:ಪ್ರೀತಿಸಲು ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಕಿರಾತಕ

ABOUT THE AUTHOR

...view details