ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳು. ಈ ಹಬ್ಬವನ್ನು ಈದ್ ಉಲ್ ಫಿತ್ರ್ ಎಂದು ಸಹ ಕರೆಯಲಾಗುತ್ತದೆ. ಇದನ್ನು ಮುಸ್ಲಿಮರು ಉಪವಾಸ ಮತ್ತು ಪ್ರಾರ್ಥನೆಯ ತಿಂಗಳು ಎಂದು ಆಚರಿಸುತ್ತಾರೆ. ಇದು ಸುಮಾರು 29-30 ದಿನಗಳವರೆಗೆ ಇರುತ್ತದೆ. ಈ ವರ್ಷ ರಂಜಾನ್ ಹಬ್ಬವನ್ನು ಏಪ್ರಿಲ್ 14 ರಿಂದ ಮೇ 13 ರವರೆಗೆ ಆಚರಿಸಲಾಯಿತು. ಇಂದು ಈ ಪವಿತ್ರ ತಿಂಗಳ ಕೊನೆಯ ಶುಕ್ರವಾರ ಅಂದರೆ ಜಮಾತ್-ಉಲ್-ವಿದಾ.
ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ಪವಿತ್ರ ರಂಜಾನ್ ತಿಂಗಳಲ್ಲಿ, ಪ್ರಪಂಚದಾದ್ಯಂತ ಮುಸ್ಲಿಮರು ಉಪವಾಸ, ದಾನ, ಧರ್ಮ ಮಾಡುತ್ತ ದೇವರ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ವರ್ಷವಿಡೀ ಬರುವ ಶುಕ್ರವಾರವನ್ನು (ಜುಮ್ಮಾ) ಇಸ್ಲಾಂ ಧರ್ಮದ ಪ್ರಕಾರ ವಾರದ ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ ರಂಜಾನ್‌ನ ಕೊನೆಯ ಶುಕ್ರವಾರವು ತನ್ನದೇ ಆದ ಮಹತ್ವವನ್ನು ಹೊಂದಿದೆ.