ಕರ್ನಾಟಕ

karnataka

ETV Bharat / bharat

ಕೊಲೆ ಪ್ರಕರಣ.. 30 ಸೆಕೆಂಡ್​ನಲ್ಲಿ ಆರೋಪಿ ಮೇಲೆ ದಾಳಿ ಮಾಡಿದ್ದ ಶ್ವಾನಕ್ಕೆ ಅತ್ಯುತ್ತಮ ಸಿಬ್ಬಂದಿ ಗೌರವ - Best Personal of the Month Award to Dog

ಉತ್ತರಾಖಂಡದ ಪೊಲೀಸ್​ ಶ್ವಾನಕ್ಕೆ ತಿಂಗಳ ಅತ್ಯುತ್ತಮ ಸಿಬ್ಬಂದಿ ಗೌರವ ಸಿಕ್ಕಿದೆ. ಪ್ರಕರಣವೊಂದರಲ್ಲಿ ಆರೋಪಿಗಳನ್ನು ಮತ್ತೆ ಮಾಡಿದ್ದರಿಂದ ಅಲ್ಲಿನ ಪೊಲೀಸರ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ವಾನಕ್ಕೆ ಅತ್ಯುತ್ತಮ ಸಿಬ್ಬಂದಿ ಗೌರವ
ಶ್ವಾನಕ್ಕೆ ಅತ್ಯುತ್ತಮ ಸಿಬ್ಬಂದಿ ಗೌರವ

By

Published : Mar 12, 2023, 2:51 PM IST

Updated : Mar 12, 2023, 3:32 PM IST

ಜಸ್ಪುರ್​(ಉತ್ತರಾಖಂಡ):ಆಧುನಿಕ ಯುಗದ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಆದರೂ, ಪೊಲೀಸ್​ ಇಲಾಖೆಯಲ್ಲಿ ಶ್ವಾನದಳದ ಸ್ಥಾಯಿ ಅಳಿದಿಲ್ಲ. ಕೆಲ ಪ್ರಕರಣಗಳ ತನಿಖೆಯಲ್ಲಿ ಶ್ವಾನವೇ ಅಂತಿಮವಾಗಿರುತ್ತದೆ. ಅದು ನೀಡುವ ಜಾಡೇ ತನಿಖೆಗೆ ಪೂರಕವಾಗಿರುತ್ತದೆ. ಪ್ರಕರಣವೊಂದರಲ್ಲಿ ಅಪರಾಧಿಗಳನ್ನು ಪತ್ತೆ ಮಾಡಿದ ನಾಯಿಗೆ ಉತ್ತರಾಖಂಡದಲ್ಲಿ "ತಿಂಗಳ ಉತ್ತಮ ಸಿಬ್ಬಂದಿ" ಎಂಬ ಪಟ್ಟ ಸಿಕ್ಕಿದೆ. ಅಲ್ಲದೇ, ತಿಂಗಳಿಗೆ 2 ಸಾವಿರ ರೂಪಾಯಿ ಸಂಬಳದ ಉದ್ಯೋಗವೂ ಒದಗಿಬಂದಿದೆ.

ಟ್ರೆಕ್ಕರ್​ ಕೇಟಿಯಿಂದ ಹಲವು ಯಶಸ್ವಿ ಕಾರ್ಯಾಚರಣೆ.. ಹೌದು, ಉತ್ತರಾಖಂಡದ ಜಸ್ಪುರ್​ದ ಪೊಲೀಸ್​ ಇಲಾಖೆಯಲ್ಲಿ ಕೆಲಸ ಮಾಡುವ ಟ್ರೆಕ್ಕರ್ ಕೇಟಿ ಶ್ವಾನಕ್ಕೆ ಈ ಶ್ರೇಯ ದಕ್ಕಿದೆ. ಡೋರಿ ಲಾಲ್ ಹತ್ಯೆ ಪ್ರಕರಣವನ್ನು ಭೇದಿಸಿದ ಟ್ರೆಕ್ಕರ್ ಕೇಟಿಯನ್ನು ಅಲ್ಲಿನ ಪೊಲೀಸ್​ ವರಿಷ್ಠಾಧಿಕಾರಿ (ಎಸ್‌ ಪಿ) ಅವರು ಈ ಚುರುಕು ಬುದ್ಧಿಯ ಶ್ವಾನವನ್ನು ಒಂದು ತಿಂಗಳ ಕಾಲ ಉದ್ಯೋಗಿಯನ್ನಾಗಿ ನೇಮಿಸಿಕೊಂಡಿದ್ದಾರೆ. ತಿಂಗಳಿಗೆ ಎರಡೂವರೆ ಸಾವಿರ ರೂಪಾಯಿ ಸಂಬಳವನ್ನೂ ಸಹ ಘೋಷಿಸಿದ್ದಾರೆ. ಜಿಲ್ಲೆಯಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಟ್ರೆಕ್ಕರ್ ಕೇಟಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದೆ. ಇದರಿಂದ ಪೊಲೀಸ್ ತಂಡ ಪ್ರಕರಣಗಳನ್ನು ಭೇದಿಸಿ ಆರೋಪಿಗಳ ಹೆಡೆಮುರಿ ಕಟ್ಟಿದೆ.

ಮಾರ್ಚ್ 6 ರಂದು ಜಸ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಶಾಕಿಬ್ ಕೊಲೆ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದರು. ಶ್ವಾನದಳದ ತಂಡದಲ್ಲಿದ್ದ ಟ್ರ್ಯಾಕರ್ ಕೇಟಿ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಮೃತರ ಬಟ್ಟೆಯ ವಾಸನೆ ಗ್ರಹಿಸಿದ ಕೇಟಿ ಶ್ವಾನ ಕೇವಲ 30 ಸೆಕೆಂಡ್‌ಗಳಲ್ಲಿ ಆರೋಪಿಯ ಮೇಲೆ ದಾಳಿ ಮಾಡಿತ್ತು. ನಂತರ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ, ಕಾಸಿಂ ಅಲಿಯಾಸ್ ಡ್ಯಾನಿಶ್ ಎಂಬಾತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ.

ಶ್ವಾನದ ನಿಖರ ದಾಳಿಗೆ ಮೆಚ್ಚುಗೆ ಸೂಚಿಸಿದ ಎಸ್‌ಎಸ್‌ಪಿ ಮಂಜುನಾಥ ಟಿಸಿ ಅವರು ಶ್ವಾನ ಕೇಟಿಗೆ ಉತ್ತಮ ಕಾರ್ಯನಿರ್ವಹಣೆಗಾಗಿ ತಿಂಗಳ ಅತ್ಯುತ್ತಮ ಸಿಬ್ಬಂದಿ ಎಂದು ಗೌರವ ನೀಡಿದ್ದಾರೆ. ಅಲ್ಲದೇ, ಎರಡೂವರೆ ಸಾವಿರ ರೂಪಾಯಿ ಮತ್ತು ತಿಂಗಳ ಉದ್ಯೋಗಿ ಎಂದು ಘೋಷಿಸಿದ್ದಾರೆ.

ಪ್ರಕರಣಗಳಲ್ಲಿ ಕೇಟಿ ಜಾಡು:ಫೆಬ್ರುವರಿ 25 ರಂದು ಕಿಚ್ಚಾ ಕೊಟ್ವಾಲಿ ಪ್ರದೇಶದ ಗೋಧಿ ಹೊಲದಲ್ಲಿ ಗೋಣಿ ಚೀಲದಲ್ಲಿ ಮೃತದೇಹ ಪತ್ತೆಯಾಗಿತ್ತು. ಅನಾಮಿಕ ಕೊಲೆ ಆರೋಪಿಯ ಪತ್ತೆಗೆ ಜಾಲ ಬೀಸಲಾಗಿತ್ತು. ಇದರಲ್ಲಿ ಶ್ವಾನ ಟ್ರೆಕ್ಕರ್ ಕೇಟಿಯನ್ನು ಬಳಸಲಾಗಿತ್ತು. ಶ್ವಾನದ ಸಮೇತ ಪೊಲೀಶ್​ ತಂಡ ಆರೋಪಿಗಳ ಮನೆಗೆ ನುಗ್ಗಿ ಆರೋಪಿಗಳ ಪತ್ತೆ ಮಾಡಿದ್ದರು. ದೋರಿ ಲಾಲ್ ಹತ್ಯೆ ಪ್ರಕರಣದಲ್ಲಿ ಆತನ ಸ್ನೇಹಿತ ಸಬೀರ್​ನನ್ನು ಪೊಲೀಸರು ಬಂಧಿಸಿದ್ದರು. ಇದಲ್ಲದೇ ಹಲವು ಪ್ರಕರಣಗಳಲ್ಲಿ ಜಿಲ್ಲಾ ಪೊಲೀಸರು ಟ್ರೆಕ್ಕರ್ ಕೇಟಿಯನ್ನು ಬಳಸಿಕೊಂಡಿದ್ದರು. ಇದರಲ್ಲಿ ಪೊಲೀಸ್ ತಂಡ ಹಲವು ಯಶಸ್ಸು ಕಂಡಿದೆ.

ಓದಿ:ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಇಂಥ ಭೀಕರ ದೃಶ್ಯ ಎಂದಾದರೂ ನೋಡಿದ್ದೀರಾ!

Last Updated : Mar 12, 2023, 3:32 PM IST

ABOUT THE AUTHOR

...view details