ಕೋಲ್ಕತ್ತಾ(ಪಶ್ಚಿಮ ಬಂಗಾಳ): ವೆಬ್ ಸಿರೀಸ್ ಶೂಟಿಂಗ್ನಲ್ಲಿ ಭಾಗಿಯಾಗಲು ತೆರಳಿದ್ದ ವೇಳೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಬೆಂಗಾಲಿ ನಟಿ ಪ್ರಿಯಾಂಕಾ ಸರ್ಕಾರ್ ಹಾಗೂ ನಟ ಅರ್ಜುನ್ ಚಕ್ರವರ್ತಿ ಗಾಯಗೊಂಡಿದ್ದಾರೆ.
ನಿನ್ನೆ ರಾತ್ರಿ ನ್ಯೂ ಟೌನ್ನ ಇಕೋ ಪಾರ್ಕ್ ಬಳಿ ರಾತ್ರಿ 11:30ಕ್ಕೆ ಈ ಘಟನೆ ನಡೆದಿದ್ದು, ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ನಡೆಯುತ್ತಿದ್ದ ವೆಬ್ ಸಿರೀಸ್ನಲ್ಲಿ ಭಾಗಿಯಾಗಲು ಇವರಿಬ್ಬರು ತೆರಳಿದ್ದರು. ಈ ವೇಳೆ, ಬೈಕ್ ಸವಾರ ಡಿಕ್ಕಿ ಹೊಡೆದಿರುವ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ನಟಿ ಪ್ರಿಯಾಂಕಾ ಕಾಲು ಹಾಗೂ ಸೊಂಟದ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗುವ ಸಾಧ್ಯತೆ ಇದೆ.