ಕೋಲ್ಕತ್ತಾ(ಪಶ್ಚಿಮಬಂಗಾಳ): ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಆರು ದಿನದ ಮೊಮ್ಮಗಳನ್ನು ಮಕ್ಕಳ ಕಳ್ಳಸಾಗಣೆ ದಂಧೆಯ ಜಾಲವೊಂದಕ್ಕೆ ಮಾರಾಟ ಮಾಡಿದ ಆರೋಪಿ ಮಹಿಳೆ, ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯನ್ನು ಬಂಧಿಸಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಶಿಶು ಕಾಣೆಯಾದ ಬಗ್ಗೆ ಆ ಮಗುವಿನ ತಾಯಿ ಶಾಂತಿಪುರದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಳಿಕ ಇಂತಹದ್ದೊಂದು ಪ್ರಕರಣ ಬಯಲಿಗೆ ಬಂದಿದೆ.
ಘಟನೆ ಬಗ್ಗೆ ಪೊಲೀಸರು ಹೇಳುವುದಿಷ್ಟು:ಖಲೀದಾ ಬೀಬಿ ಎಂದು ಗುರುತಿಸಲಾದ ಆರೋಪಿ ಅಜ್ಜಿ ಈಗ ತಲೆಮರೆಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಗುವನ್ನು ಮಾರಾಟ ಮಾಡಲು ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದು ನಂಬಲಾದ ಇನ್ನೊಬ್ಬ ಮಹಿಳೆ ಕೂಡ ಖಾಣೆಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಅಕ್ಟೋಬರ್ 9 ರಂದು ದೂರುದಾರರು ಮಗುವಿಗೆ ಜನ್ಮ ನೀಡಿದ್ದರು. ಮೂರು ದಿನಗಳ ನಂತರ ಅಜ್ಜಿ ಮಗುವನ್ನು ನೋಡಲು ಆಗಮಿಸಿದ್ದರು. ಈ ವೇಳೆ ಶಿಶುವಿನ ತಾಯಿಗೆ ಮಗು ಮಾರಾಟ ಮಾಡುವಂತೆ ಒತ್ತಾಯಿಸಿದ್ದರು.
ಈ ಮಾತುಕತೆ ಯಾದ ಬಳಿಕ ಭಾನುವಾರ ತನ್ನ ಮಗು ನಾಪತ್ತೆಯಾಗಿತ್ತು. ಈ ಬಗ್ಗೆ ನಾನು ಅವರ ಬಳಿ ವಿಚಾರಿಸಿದಾಗ ಮಗು ಮಾರಾಟ ಮಾಡಿದ ವಿಷಯವನ್ನು ತಿಳಿಸಿದರು. ಸ್ಥಳೀಯ ಏಜೆಂಟರ ಸಹಾಯದಿಂದ ಮಗುವನ್ನು 60,000 ರೂ.ಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಶಿಶುವಿನ ತಾಯಿ ಅಜ್ಜಿಯ ಬಗ್ಗೆ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ. ಇನ್ನು ಪೊಲೀಸರಿಗೆ ಮಾಹಿತಿ ನೀಡುವ ಮೊದಲೇ ಆರೋಪಿ ಮಹಿಳೆ ಪರಾರಿಯಾಗಿದ್ದಾಳೆ ಎಂದೂ ದೂರು ನೀಡಿರುವ ಮಗುವಿನ ತಾಯಿ ಮಾಹಿತಿ ನೀಡಿದ್ದಾಳೆ.
ಇದೇ ವೇಳೆ, ಮಹಿಳೆ ತಾವು ಆರ್ಥಿಕವಾಗಿ ದುರ್ಬಲವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಹಾಗೂ ತನ್ನ ಪತಿ ಪಶ್ಚಿಮ ಬಂಗಾಳ ಹೊರಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾಳೆ. “ಪೊಲೀಸರು ನನ್ನ ಮಗಳನ್ನು ಪತ್ತೆಹಚ್ಚಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಘೋರ ಅಪರಾಧ ಎಸಗಿರುವ ನನ್ನ ತಾಯಿಗೆ ಅವರು ಸೂಕ್ತ ಶಿಕ್ಷೆ ನೀಡುತ್ತಾರೆ ಎಂದು ನಂಬಿದ್ದೇನೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಸ್ನೇಹಿತರೊಂದಿಗೆ ಸಹಕರಿಸುವಂತೆ ಒತ್ತಾಯ: ಬೆಂಗಳೂರಿನಲ್ಲಿ ವಿಕೃತ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ