ಪಶ್ಚಿಮ ಬಂಗಾಳ:ದೆಹಲಿಯ ಇಬ್ಬರು ಗೂಂಡಾಗಳ ಕೈಗೆ ಬಂಗಾಳ ಹೋಗುವುದಿಲ್ಲ ಎಂದು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
'ಬಂಗಾಳವನ್ನು ದೆಹಲಿಯ ಇಬ್ಬರು ಗೂಂಡಾಗಳ ಕೈ ಸೇರಲು ನಾನು ಬಿಡುವುದಿಲ್ಲ'; ಮಮತಾ ಗುಟುರು - ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಬಂಗಾಳವನ್ನು ದೆಹಲಿಯ ಇಬ್ಬರು ಗೂಂಡಾಗಳ ಕೈ ಸೇರಲು ನಾವು ಬಿಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Mamata Banarjee
ದಕ್ಷಿಣ ದಿನಾಜ್‌ಪುರದ ತಪನ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಹೆಸರು ತೆಗೆಯದೇ ಮೋದಿ ಮತ್ತು ಅಮಿತ್ ಷಾ ಅವರನ್ನು ದೀದಿ "ಗೂಂಡಾಗಳು" ಎಂದು ಕರೆದಿದ್ದಾರೆ.
ಬಂಗಾಳವು ಬಂಗಾಳದಲ್ಲಿಯೇ ಇದೆ ಎಂಬುದನ್ನು ನೀವು ನೋಡಬೇಕಾಗಿದೆ. ಗುಜರಾತ್ ಬಂಗಾಳವನ್ನು ಆಕ್ರಮಿಸಿಕೊಳ್ಳಲು ಸಾಧ್ಯವಾಗಬಾರದು. ಬಂಗಾಳ ದೆಹಲಿಯ ಕೈಗೂ ಹೋಗಬಾರದು. ನಾವು ಬಂಗಾಳವನ್ನು ದೆಹಲಿಯ ಕೈ ಸೇರಲು ಬಿಡುವುದಿಲ್ಲ. ಬಂಗಾಳವನ್ನು ದೆಹಲಿಯ ಇಬ್ಬರು ಗೂಂಡಾಗಳ ಕೈ ಸೇರಲು ನಾವು ಬಿಡುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.