ಕೋಲ್ಕತ್ತಾ:ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಸಾಕಷ್ಟು ಮನ್ನಣೆಗಳು ದೊರೆತಿವೆ. ಮುಂದಿನ ದಿನಗಳಲ್ಲಿ ರಾಜ್ಯವು ವಿಶ್ವದ ಅತ್ಯುತ್ತಮ ರಾಜ್ಯವಾಗಲಿದೆ. ವಿಶ್ವಸಂಸ್ಥೆ ಕನ್ಯಾಶ್ರೀ ಪ್ರಶಸ್ತಿ ನೀಡುತ್ತಿದೆ. ಬಂಗಾಳದಲ್ಲಿ ನಡೆಯುವ ದುರ್ಗಾ ಪೂಜೆ ಪ್ರಪಂಚದಲ್ಲೇ ಅತ್ಯುತ್ತಮವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನೇತಾಜಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಉತ್ಕರ್ಷ್ ಬಂಗಾಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಗಾಳವು ಮತ್ತೊಮ್ಮೆ ಸಾಂಸ್ಕೃತಿಕ ಪ್ರವಾಸೋದ್ಯಮದ ತಾಣವಾಗಲಿದೆ. ಈಗಾಗಲೇ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. 'ಬೆಸ್ಟ್ ಡೆಸ್ಟಿನೇಶನ್ ಫಾರ್ ಕಲ್ಚರ್ ಅವಾರ್ಡ್' -2023ಅನ್ನು ಬರ್ಲಿನ್‌ನಲ್ಲಿ ಪಶ್ಚಿಮ ಬಂಗಾಳಕ್ಕೆ ನೀಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಅಮಿತ್ ಶಾ ನಿಷ್ಪ್ರಯೋಜಕ, 2024ರಲ್ಲಿ ಖೇಲಾ ಹೋಬೆ: ಮಮತಾ ಬ್ಯಾನರ್ಜಿ