ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಐದು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮುಂದಿನ ನಾಲ್ಕು ಹಂತದ ಪ್ರಚಾರಕ್ಕಾಗಿ ಬಿಜೆಪಿ ವಿಶೇಷ ಕ್ರಮ ಕೈಗೊಂಡಿದೆ. ತಾನು ನಡೆಸುವ ರ‍್ಯಾಲಿಗಳಲ್ಲಿ 500 ವ್ಯಕ್ತಿಗಳನ್ನ ಮೀರದಂತೆ ಕ್ರಮ ಕೈಗೊಂಡಿದೆ.
ದೇಶದಲ್ಲಿ ಎರಡನೇ ಹಂತದ ಕೋವಿಡ್ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಈ ಮಾಹಿತಿ ಹೊರಹಾಕಿದ್ದಾರೆ. ಏಪ್ರಿಲ್ 23ರಂದು ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದು, ಅದರಲ್ಲಿ 500 ಜನರು ಮಾತ್ರ ಭಾಗಿಯಾಗಲಿದ್ದಾರೆ, ಕೋವಿಡ್ ಮಾರ್ಗಸೂಚಿಗಳೊಂದಿಗೆ ಮುಂದಿನ ಎಲ್ಲ ಚುನಾವಣಾ ಪ್ರಚಾರ ನಡೆಸಲು ಬಿಜೆಪಿ ನಿರ್ಧರಿಸಿದ್ದು, ಹೆಚ್ಚಿನ ಎಲ್ಇಡಿ ಸ್ಕ್ರೀನ್ ಬಳಕೆ ಮಾಡಲು ಮುಂದಾಗಿದೆ.
ಏಪ್ರಿಲ್ 23ರಂದು ನಮೋ, ಮುರ್ಷಿದಾಬಾದ್, ಸೌತ್ ಕೋಲ್ಕತ್ತಾ, ಸಿಯೋರಿ ಹಾಗೂ ಮಾಲ್ಡಾದಲ್ಲಿ ಪ್ರಚಾರ ಸಭೆ ನಡೆಸಲಿದ್ದು, ಹೆಚ್ಚಿನ ಎಲ್ಇಡಿ ಸ್ಕ್ರೀನ್ ಬಳಕೆ ಮಾಡುವ ಮೂಲಕ ಪ್ರಚಾರ ಸಭೆ ನಡೆಸಲಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಕೇಂದ್ರ ಚುನಾವಣಾ ಆಯೋಗ ಕೂಡ ಕೆಲವೊಂದು ಮಾರ್ಗಸೂಚಿ ಹೊರಡಿಸಲಾಗಿದ್ದು, ಪ್ರತಿಯೊಂದು ಹಂತದಲ್ಲೂ 72 ಗಂಟೆ ಶಾಂತಿ ಕಾಪಾಡುವಂತೆ ತಿಳಿಸಿದ್ದಾರೆ.