ಸತಾರಾ(ಮಹಾರಾಷ್ಟ್ರ):ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬೃಹತ್ ಉಡದ ಮೇಲೆ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಅರಣ್ಯಾಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರೆಲ್ಲರೂ ಬೇಟೆಗಾರರಾಗಿದ್ದಾರೆ. ಗೋಥಾಣೆಯ ಗಭಾ ಪ್ರದೇಶದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ವಲಯದಲ್ಲಿ ಈ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಾಲ್ವರ ಬಂಧನ:ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಂಗಾಳದ ಮಾನಿಟರ್ ಉಡದ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸಂದೀಪ್ ತುಕಾರಾಂ, ಪವಾರ್ ಮಂಗೇಶ್, ಜನಾರ್ದನ್ ಕಾಮ್ಟೇಕರ್ ಮತ್ತು ಅಕ್ಷಯ್ ಸುನೀಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೇಟೆಗಾರರಾಗಿದ್ದು, ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ ಕೋರ್ ವಲಯಕ್ಕೆ ಪ್ರವಾಸಿಗರಾಗಿ ಪ್ರವೇಶ ನೀಡಿ ಬೇಟೆಯಾಡುತ್ತಿದ್ದರು.
ಏನಿದು ಘಟನೆ:ಬೇಟೆಗಾರರು ಪ್ರವಾಸಿಗರಾಗಿ ಅರಣ್ಯದೊಳಗೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಪ್ರಾಣಿಗಳನ್ನು ಬೇಟೆಯಾಡಲು ಅರಣ್ಯದಲ್ಲಿ ಸಂಚಾರ ಆರಂಭಿಸಿದ್ದರು. ಇವರ ಓಡಾಟವೆಲ್ಲವೂ ಅರಣ್ಯದಲ್ಲಿ ಹಾಕಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಓದಿ:ಎಸ್ಎಸ್ಎಲ್ಸಿ ಪರೀಕ್ಷೆ ಮುಗಿದ ಬಳಿಕ ಪ್ರಿಯಕರನ ಜೊತೆ ತೆರಳಿದ್ದ ಹುಡಗಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಹುಲಿ ಎಣಿಕೆ:ಹುಲಿಗಳು ಚಲನವಲನ ಮತ್ತು ಅದರ ಸಂಖ್ಯೆ ಕಂಡ ಹಿಡಿಯಲು ಅರಣ್ಯ ಇಲಾಖೆ ಕಾಡಿನಲ್ಲಿ ಸಿಸಿಟಿವಿ ಅಳವಡಿಸಿತ್ತು. ಹುಲಿ ಗಣತಿಗಾಗಿ ತಿಂಗಳ ಕೊನೆಯ ದಿನ ಅಂದ್ರೆ 31 ಮಾರ್ಚ್ 2022ರಂದು ಅರಣ್ಯ ಇಲಾಖೆ ಸಿಸಿಟಿವಿ ಪರಿಶೀಲನೆ ನಡೆಸಿದೆ. ಈ ವೇಳೆ ಬೇಟೆಗಾರರ ಚಲನವಲನ ಕಂಡಿದ್ದು, ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಶೋಧ ಕಾರ್ಯಾಚರಣೆ ಕೈಗೊಂಡಿತ್ತು.
ಆರೋಪಿಗಳ ಪತ್ತೆ:ಆರೋಪಿಗಳ ಪತ್ತೆಗೆ ಅರಣ್ಯಾಧಿಕಾರಿಗಳು ತನಿಖಾ ತಂಡ ರಚಿಸಿ ಮಾವಿನ ಘಟ್ಟದಿಂದ ಹುಲಿ ಸಂರಕ್ಷಿತ ಪ್ರದೇಶದ ಪಶ್ಚಿಮ ಭಾಗದ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿದರು. ಈ ಮಧ್ಯೆ ಅಧಿಕಾರಿಗಳಿಗೆ ಮಾಹಿತಿದಾರರಿಂದ ಆರೋಪಿಗಳ ಸುಳಿವು ಬಂದಿದೆ. ಏಪ್ರಿಲ್ 1 ರಂದು ಹಾವಿತ್ ಗ್ರಾಮಕ್ಕೆ ಹೋಗಿ ವಿಚಾರಣೆ ನಡೆಸಿದ್ದ ಅರಣ್ಯ ಅಧಿಕಾರಿಗಳು ಕೆಲವು ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿದ್ದಾರೆ. ಕೂಲಂಕಷವಾಗಿ ತನಿಖೆ ನಡೆಸಿದ ಅಧಿಕಾರಿಗಳು ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದರು.
ಮೂವರು ಬಂಧನ: ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ಆತ ಅರಣ್ಯದಲ್ಲಿ ಬೇಟೆಯಾಡಲು ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆಯ ನಂತರ ಆರೋಪಿ ಬಳಿಯಿದ್ದ ಪರವಾನಗಿ ಪಡೆಯದ ಬಂದೂಕು ಮತ್ತು ಬೈಕ್ನ್ನು ಜಪ್ತಿ ಮಾಡಿಕೊಂಡರು. ಬಳಿಕ ರತ್ನಗಿರಿಯಲ್ಲಿ ಆರೋಪಿಗಳು ಅಡಗಿರುವುದು ಅರಣ್ಯ ಇಲಾಖೆಗೆ ತಿಳಿಯಿತು. ಅರಣ್ಯ ಕಾಯ್ದೆ ಪ್ರಕಾರ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಕಸ್ಟಡಿಗೆ ಒಪ್ಪಿಸಿದರು.
ಓದಿ:ಜಾಮೀನು ಪಡೆದ ಅತ್ಯಾಚಾರ ಆರೋಪಿ.. ಸುಪ್ರೀಂನ್ನು ಕೆರಳಿಸಿದ ‘Bhaiya Is Back’ ಪೋಸ್ಟರ್ಗಳು!
ಅತ್ಯಾಚಾರ ಬೆಳಕಿಗೆ: ಕಸ್ಟಡಿಗೆ ಪಡೆದ ನಂತರ ಆರೋಪಿಗಳ ಮೊಬೈಲ್ ಫೋನ್ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿಯೊಬ್ಬ ಬೆಂಗಾಳ ಮಾನಿಟರ್ ಉಡದ ಮೇಲೆ ಅತ್ಯಾಚಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ನೋಡಿದ ಅಧಿಕಾರಿಗಳಿಗೆ ಶಾಕ್ ಆಗಿದೆ. ಅಷ್ಟೇ ಅಲ್ಲದೇ ಅಧಿಕಾರಿಗಳು ಮೊಬೈಲ್‌ನಲ್ಲಿ ಕೆಲವು ಫೋಟೋಗಳು ಮತ್ತು ವಿಡಿಯೋಗಳನ್ನು ಸಹ ಕಂಡಿದ್ದಾರೆ.
ಅಧಿಕಾರಿಗಳ ಹೇಳಿಕೆ: ಅತ್ಯಂತ ಅಸಹ್ಯ ಮತ್ತು ಇದುವರೆಗೆ ಈ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆದಿಲ್ಲ. ಅಪರಾಧ ಸಾಬೀತಾದರೆ ಆರೋಪಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.