ಕೋಲ್ಕತ್ತಾ: ನಾರದಾ ಪ್ರಕರಣದಲ್ಲಿ ಮೂವರು ಟಿಎಂಸಿ ನಾಯಕರು ಮತ್ತು ಮಾಜಿ ನಗರ ಮೇಯರ್‌ನನ್ನು ಬಂಧಿಸಲಾಗಿರುವ ಸಂಬಂಧ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಹೇಳಿಕೆ ರಾಜ್ಯಪಾಲರ ಕುರ್ಚಿಯನ್ನೇ ಅಲ್ಲಾಡಿಸಿದೆ.
ಈ ಸಂಬಂಧ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್, ಆರೋಪವನ್ನು ಎದುರಿಸದೇ, ಈ ವಿಷಯವನ್ನು ಬಂಗಾಳ ಜನರ ವಿವೇಚನೆಗೆ ಬಿಡುವುದಾಗಿ ಹೇಳಿದ್ದಾರೆ.
ಸಿಬಿಐ ಕೋರಿಕೆಯ ಮೇರೆಗೆ ಮಂತ್ರಿಗಳಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಟಿಎಂಸಿ ಶಾಸಕ ಮದನ್ ಮಿತ್ರಾ ಮತ್ತು ಕೋಲ್ಕತ್ತಾದ ಮಾಜಿ ಮೇಯರ್ ಸೋವನ್ ಚಟರ್ಜಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಮೇ 7 ರಂದು ಅನುಮತಿ ನೀಡಿದ್ದರು. ಇದಾದ ನಂತರ ಮೇ 17 ರಂದು ಮಧ್ಯೆ ಕೇಂದ್ರ ಏಜೆನ್ಸಿಯಿಂದ ಬಂಧಿಸಲ್ಪಟ್ಟಿದ್ದರು.
ಹೂಗ್ಲಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ರಾಜ್ಯಪಾಲರು ತೃಣಮೂಲ ಕಾಂಗ್ರೆಸ್ಗೆ ದಿನಪೂರ್ತಿ ಹಿಂಸೆ ಕೊಡುತ್ತಿದ್ದಾರೆ. ನಾಲ್ಕು ನಾಯಕರ ಬಂಧನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಿರುವ ಅವರು, ಪೊಲೀಸ್ ಠಾಣೆಗಳಲ್ಲಿ ರಾಜ್ಯಪಾಲರ ವಿರುದ್ಧ ಜನರು ದೂರು ನೀಡಬೇಕೆಂದು ಸೂಚಿಸಿದ್ದಾರೆ.