ಕೋಲ್ಕತ್ತಾ:ತಮ್ಮ ಸರ್ಕಾರ ಕೋವಿಡ್ ಲಸಿಕೆಗಳನ್ನು ತಯಾರಿಸಲು ಭೂಮಿಯನ್ನು ನೀಡಲು ಸಿದ್ಧವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.
ಮೋದಿಗೆ ದೀದಿ ಪತ್ರ: ಕೋವಿಡ್ ಲಸಿಕೆ ಉತ್ಪಾದನೆಗೆ ಭೂಮಿ ನೀಡಲು ಸಿದ್ಧ ಎಂದ ಮಮತಾ - ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಪಶ್ಚಿಮ ಬಂಗಾಳಲ್ಲಿ ಕೋವಿಡ್ ಲಸಿಕೆ ತಯಾರಿಕಾ ಘಟಕ ಸ್ಥಾಪಿಸಲು ಭೂಮಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದಲ್ಲಿ ಅಧಿಕೃತ ಲಸಿಕೆ ತಯಾರಿಕೆಗಾಗಿ ಯಾವುದೇ ಉತ್ಪಾದನೆ / ಫ್ರಾಂಚೈಸಿ ಕಾರ್ಯಾಚರಣೆಗೆ ಭೂಮಿ ಮತ್ತು ಬೆಂಬಲವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಜೊತೆಗೆ ಪತ್ರದಲ್ಲಿ ಮಮತಾ ಬ್ಯಾನರ್ಜಿ ಲಸಿಕೆಗಳನ್ನು ಹೆಚ್ಚು ಮತ್ತು ಪೂರ್ವಭಾವಿಯಾಗಿ ಆಮದು ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ದೇಶದಲ್ಲಿ ಲಸಿಕೆಗಳ ಉತ್ಪಾದನೆಯು ಅತ್ಯಂತ ಅಸಮರ್ಪಕವಾಗಿದೆ.. ಜಾಗತಿಕವಾಗಿ, ಈಗ ಅನೇಕ ತಯಾರಕರು ಲಭ್ಯವಿದ್ದಾರೆ. ಅಧಿಕೃತ ತಯಾರಕರನ್ನು ಗುರುತಿಸಲು ಮತ್ತು ವಿಶ್ವದ ವಿವಿಧ ಭಾಗಗಳಿಂದ ಲಸಿಕೆಗಳನ್ನು ತ್ವರಿತವಾಗಿ ಆಮದು ಮಾಡಿಕೊಳ್ಳಲು ಈಗ ಸಾಧ್ಯವಿದೆ ಎಂದು ಅವರು ಪತ್ರದಲ್ಲಿ ಮನವರಿಕೆ ಮಾಡಿಕೊಡುವ ಯತ್ನ ಮಾಡಿದ್ದಾರೆ.