ಪಶ್ಚಿಮ ಬಂಗಾಳದ 45 ಕ್ಷೇತ್ರಗಳಿಗೆ ನಡೆದ 5ನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಶೇ. 78ರಷ್ಟು ವೋಟಿಂಗ್ ಆಗಿದೆ. ಇಂದಿನ ಚುನಾವಣಾ ಕಣದಲ್ಲಿ ಒಟ್ಟು 342 ಅಭ್ಯರ್ಥಿಗಳು ಕಣದಲ್ಲಿದ್ದರು.
ಪ.ಬಂಗಾಳ 5ನೇ ಹಂತದ ಮತದಾನ ಮುಕ್ತಾಯ: ಶೇ. 78ರಷ್ಟು ಮತದಾನ - ಉಪಕದನ
![ಪ.ಬಂಗಾಳ 5ನೇ ಹಂತದ ಮತದಾನ ಮುಕ್ತಾಯ: ಶೇ. 78ರಷ್ಟು ಮತದಾನ Bengal Election Poll](https://etvbharatimages.akamaized.net/etvbharat/prod-images/768-512-11432757-thumbnail-3x2-hrss.jpg)
19:33 April 17
ಶೇ. 78ರಷ್ಟು ಮತದಾನ
15:52 April 17
ಮಧ್ಯಾಹ್ನ 3 ಗಂಟೆವರೆಗೆ ಶೇ.69ರಷ್ಟು ವೋಟಿಂಗ್
ಪಶ್ಚಿಮ ಬಂಗಾಳದಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು,ಮಧ್ಯಾಹ್ನ 3 ಗಂಟೆವರೆಗೆ ಶೇ.69ರಷ್ಟು ವೋಟಿಂಗ್
ಟಿಎಂಸಿ ಸಂಸದೆ ಮಿಮಿ ಚಕ್ರಬೋರ್ತಿ ತಮ್ಮ ಹಕ್ಕು ಚಲಾವಣೆ
12:31 April 17
ಟಿಎಂಸಿ-ಬಿಜೆಪಿ ಬೆಂಬಲಿಗರ ನಡುವೆ ಗಲಾಟೆ
ಭಿದನ್ನಗರದಲ್ಲಿ ಬಿಜೆಪಿ-ಟಿಎಂಸಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.
12:31 April 17
36.02 ರಷ್ಟು ಮತಚಲಾವಣೆ
11 ಗಂಟೆಯ ಹೊತ್ತಿಗೆ 36.02 ರಷ್ಟು ಮತದಾನವಾಗಿದೆ
10:26 April 17
ಬಿಜೆಪಿ ಬೂತ್ ಏಜೆಂಟ್ ಸಾವು
ಪಶ್ಚಿಮ ಬಂಗಾಳದ ಕಮರಹತಿಯ ಬೂತ್ ಸಂಖ್ಯೆ 107 ರಲ್ಲಿ ಬಿಜೆಪಿ ಏಜೆಂಟ್ ಸಾವಿಗೀಡಾಗಿರುವ ಕುರಿತು ಚುನಾವಣಾ ಆಯೋಗ ವರದಿ ಕೋರಿದೆ
ಅಭಿಜೀತ್ ಸಮಂತ್ ಎಂಬ ಬೂತ್ ಏಜೆಂಟ್ ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಯಾರೂ ಅವರಿಗೆ ಸಹಾಯ ಮಾಡಲಿಲ್ಲ, ಇಲ್ಲಿ ಚಿಕಿತ್ಸೆಗೆ ಯಾವುದೇ ಸೌಲಭ್ಯವಿಲ್ಲ ಎಂದು ಮೃತನ ಸಹೋದರ ಹೇಳಿದ್ದಾರೆ.
10:23 April 17
ಪ.ಬಂಗಾಳದಲ್ಲಿ ಶೇ. 16.15 ರಷ್ಟು
ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದ ಮತದಾನ ಮುಂದುವರೆದಿದ್ದು ಬೆಳಗ್ಗೆ 9:32 ರ ಹೊತ್ತಿಗೆ ಶೇ. 16.15 ರಷ್ಟು ಮತದಾನವಾಗಿದೆ.
09:31 April 17
ಮೋದಿ ಟ್ವೀಟ್
"ಇಂದು ಪಶ್ಚಿಮ ಬಂಗಾಳ ಚುನಾವಣೆಯ ಐದನೇ ಹಂತದ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಕೋರುತ್ತೇನೆ. ವಿಶೇಷವಾಗಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು ತಮ್ಮ ಹಕ್ಕು ಚಲಾಯಿಸಿ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
09:19 April 17
ಮತಗಟ್ಟೆಗೆ ಭೇಟಿ ನೀಡಿದ ಸುಜಿತ್ ಬೋಸ್
ಪಶ್ಚಿಮ ಬಂಗಾಳದ ಸಚಿವ ಮತ್ತು ಬಿಧನ್ ನಗರದ ಟಿಎಂಸಿ ಅಭ್ಯರ್ಥಿ ಸುಜಿತ್ ಬೋಸ್ ಪೂರ್ವ ಕೊಲ್ಕತ್ತಾದ ಮಹಿಳಾ ಕಾಲೇಜಿನ ಮತಗಟ್ಟೆಗೆ ಭೇಟಿ ನೀಡಿದರು.
09:14 April 17
ಮದನ್ ಮಿತ್ರ ಮತದಾನ
ಟಿಎಂಸಿ ಮುಖಂಡ ಮದನ್ ಮಿತ್ರ ಕಮರ್ಹತಿಯ ಮತದಾನ ಕೇಂದ್ರದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇದಕ್ಕೂ ಮೊದಲು ಉತ್ತರ 24 ಪರಗಣ ಜಿಲ್ಲೆಯ ದಕ್ಷಿಣೇಶ್ವರ ಕಾಳಿ ದೇವಸ್ಥಾನದಲ್ಲಿ ಭೇಟಿ ನೀಡಿದ ಅವರು ಪ್ರಾರ್ಥನೆ ಸಲ್ಲಿಸಿದರು.
09:14 April 17
ನಮಗೆ ಬಿಜೆಪಿ ಸರ್ಕಾರ ಬೇಕೆಂದ ಗೂರ್ಖಾ ಮುಖ್ಯಸ್ಥ
ಬೆಟ್ಟ ಪ್ರದೇಶಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ಸರ್ಕಾರವನ್ನು ಬದಲಾಯಿಸಬೇಕೆಂದು ನಾವು ಬಯಸುತ್ತೇವೆ. ನಮಗೆ ಬಿಜೆಪಿ ಸರ್ಕಾರ ಬೇಕು, ನಮಗೆ ನ್ಯಾಯ ಬೇಕು ಎಂದು ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್ (ಜಿಎನ್‌ಎಲ್ಎಫ್) ಅಧ್ಯಕ್ಷ ಮನ್ ಘಿಸಿಂಗ್ ಡಾರ್ಜಿಲಿನ್‌ನಲ್ಲಿ ಹೇಳಿದ್ದಾರೆ.
08:16 April 17
ಬೆಳಗ್ಗೆಯೇ ಮತಟಗಟ್ಟೆಗಳ ಮುಂದೆ ಸರತಿ ಸಾಲು
ದಕ್ಷಿಣ ಬರ್ದಮಾನ್ ಜಿಲ್ಲೆಯ ಮತಗಟ್ಟೆ ಸಂಖ್ಯೆ 263 ರ ಹೊರಗಡೆ ಸರತಿ ಸಾಲಿನಲ್ಲಿ ನಿಂತಿರುವ ಮತದಾರರು
06:43 April 17
5ನೇ ಹಂತದ ಪಶ್ಚಿಮ ಬಂಗಾಳ ಚುನಾವಣೆ ಮುಕ್ತಾಯ
ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದೆ, ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ಇಂದು 5ನೇ ಹಂತದ ಮತದಾನ ಆರಂಭವಾಗಿದೆ.