ಕರ್ನಾಟಕ

karnataka

ETV Bharat / bharat

ಬಿಜೆಪಿ ಅಭ್ಯರ್ಥಿಗೆ ಚಪ್ಪಲಿ ಹಾರದ ಸ್ವಾಗತ, ಪ್ರದರ್ಶನ... ಟಿಎಂಸಿ ವಿರುದ್ಧ ಕೇಸರಿ ಕೆಂಡ! - ಟಿಎಂಸಿ ವಿರುದ್ಧ ಕೆಂಡಾಮಂಡಲವಾದ ಕೇಸರಿ

ಬಿಜೆಪಿ ಅಭ್ಯರ್ಥಿ ಬಿಸ್ವಾಜಿತ್​ ಸಹಾ ಪ್ರಚಾರ ಮಾಡುತ್ತಿರುವ ಸ್ಥಳಗಳಲ್ಲಿ ಚಪ್ಪಲಿ ಹಾರಗಳನ್ನ ಎಸೆಯಲಾಗುತ್ತಿದೆ, ಇಲ್ಲವೇ ತೋರಿಸಲಾಗುತ್ತಿದೆ. ಟಿಎಂಸಿ ಕಾರ್ಯಕರ್ತರು ತಮಗೆ ಹೀಗೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

bengal-election-2021-shoes-and-broom-shown-to-bjp-biswajit-saha-at-lavpur
bengal-election-2021-shoes-and-broom-shown-to-bjp-biswajit-saha-at-lavpur

By

Published : Apr 8, 2021, 6:50 PM IST

ಲಾವ್​​ಪುರ( ಪಶ್ಚಿಮ ಬಂಗಾಳ):ಲಾವ್​ಪುರದ ಬಿಜೆಪಿ ಅಭ್ಯರ್ಥಿ ಬಿಸ್ವಾಜಿತ್​ ಸಹಾ ತಮ್ಮ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಆದರೆ ಅವರಿಗೆ ಪ್ರಚಾರಕ್ಕೆ ಹೋದಲ್ಲೆಲ್ಲ ಶೂ ಮತ್ತು ಚಪ್ಪಲಿಗಳ ಪ್ರದರ್ಶನವಾಗ್ತಿದೆ.

ಟಿಎಂಸಿ ಕಾರ್ಯಕರ್ತರು ತಮಗೆ ಹೀಗೆ ಮಾಡುತ್ತಿದ್ದಾರೆ ಎಂದು ಬಿಸ್ವಾಜಿತ್​​​​ ಸಹಾ ಆರೋಪಿಸಿದ್ದಾರೆ. ಅವರು ಪ್ರಚಾರ ಮಾಡುತ್ತಿರುವ ಸ್ಥಳಗಳಲ್ಲಿ ಚಪ್ಪಲಿ ಹಾರಗಳನ್ನ ಎಸೆಯಲಾಗುತ್ತಿದೆ. ಇಲ್ಲವೇ ತೋರಿಸಲಾಗುತ್ತಿದೆ.

ಕ್ಷೇತ್ರದ ಸೋಮದಂಗ್​ ಪ್ರದೇಶದಲ್ಲಿ ಈ ತರಹದ ಘಟನೆ ನಡೆದಿದೆ. ಇಷ್ಟೆಲ್ಲಾ ಮಾಡಿದರೂ ಎದೆಗುಂದದೆ ಬಿಜೆಪಿ ಅಭ್ಯರ್ಥಿ ತಮ್ಮ ಪ್ರಚಾರ ಕಾರ್ಯ ಮುಂದುವರೆಸಿದ್ದಾರೆ.

ABOUT THE AUTHOR

...view details