ಬಿರ್ಭೂಮ್(ಪಶ್ಚಿಮ ಬಂಗಾಳ):ತೃಣಮೂಲ ಕಾಂಗ್ರೆಸ್ನ ಎರಡು ಬಣಗಳ ನಡುವೆ ಘರ್ಷಣೆ ನಡೆದಿದ್ದು, ಸುಮಾರು 6 ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಈ ಘರ್ಷಣೆ ವೇಳೆ ಕಚ್ಚಾ ಬಾಂಬ್ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದುಬ್ರಾಜ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗರ-ಪದುಮ ಗ್ರಾಮದಲ್ಲಿ ಅಭಿವೃದ್ಧಿ ಅಧಿಕಾರಿಯೊಬ್ಬರು ಸರ್ಕಾರದ ವಸತಿ ಯೋಜನೆಯೊಂದರ ಸಮೀಕ್ಷೆ ಸಂಬಂಧ ಆಗಮಿಸಿದ್ದ ವೇಳೆ ಘರ್ಷಣೆ ನಡೆದಿದ್ದು, ಟಿಎಂಸಿಯ ಎರಡು ಬಣಗಳ ನಡುವೆ ಘರ್ಷಣೆ ಸಂಭವಿಸಿದೆ.
ಕಚ್ಚಾ ಬಾಂಬ್ಗಳನ್ನು ಎಸೆಯುವುದು ಮಾತ್ರವಲ್ಲದೇ ಹಲವು ಶಸ್ತ್ರಗಳನ್ನೂ ಘರ್ಷಣೆ ವೇಳೆ ಬಳಸಲಾಗಿದೆ. ಗಾಯಾಳುಗಳನ್ನು ಸುರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.