ಕರ್ನಾಟಕ

karnataka

By

Published : Jun 21, 2021, 9:25 PM IST

ETV Bharat / bharat

ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 600 ಅಂಕ ಕುಸಿತ.. ದಿನದಂತ್ಯಕ್ಕೆ 230 ಅಂಕ ಏರಿಕೆ

ಎನ್‌ಎಸ್‌ಇ ನಿಫ್ಟಿ 63.15 ಪಾಯಿಂಟ್‌ಗಳೊಂದಿಗೆ ಮುನ್ನಡೆ ಸಾಧಿಸಿ 15,746.50 ಕ್ಕೆ ತಲುಪಿದೆ. ಇನ್ನು ಸೆನ್ಸೆಕ್ಸ್​ನಲ್ಲಿ ಎನ್‌ಟಿಪಿಸಿ ಶೇ 3.87 ರಷ್ಟು ಏರಿಕೆ ಕಂಡಿದ್ದು, ಟೈಟಾನ್, ಎಸ್‌ಬಿಐ, ಎಚ್‌ಯುಎಲ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್ ಮತ್ತು ಇಂಡಸ್ಇಂಡ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ.

Benchmarks
ಷೇರು ಮಾರುಕಟ್ಟೆ

ಮುಂಬೈ: ಜಾಗತಿಕ ಷೇರು ಮಾರುಕಟ್ಟೆ ದಿನದ ಆರಂಭದಲ್ಲಿ 600 ಅಂಕಗಳ ಕುಸಿತ ಕಂಡು ಬಳಿಕ ದಿನದ ಅಂತ್ಯಕ್ಕೆ 230 ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿತು. ಎನ್‌ಎಸ್‌ಇ ನಿಫ್ಟಿ 63.15 ಪಾಯಿಂಟ್‌ಗಳೊಂದಿಗೆ ಮುನ್ನಡೆ ಸಾಧಿಸಿ 15,746.5 ಕ್ಕೆ ದಿನದ ವಹಿವಾಟು ನಿಲ್ಲಿಸಿತು.

ಇನ್ನು ಸೆನ್ಸೆಕ್ಸ್​ ಸಹ 230 ಅಂಕ ಏರಿಕೆ ಕಂಡಿತು. ಎನ್‌ಟಿಪಿಸಿ ಶೇ 3.87 ರಷ್ಟು ಏರಿಕೆ ಕಂಡು ದಿನ ಟಾಪ್​ ವಹಿವಾಟು ನಡೆಸಿತು. ಉಳಿದಂತೆ ಟೈಟಾನ್, ಎಸ್‌ಬಿಐ, ಎಚ್‌ಯುಎಲ್, ಅಲ್ಟ್ರಾಟೆಕ್ ಸಿಮೆಂಟ್, ಟಾಟಾ ಸ್ಟೀಲ್ ಮತ್ತು ಇಂಡಸ್ಇಂಡ್ ಬ್ಯಾಂಕ್ ನಂತರದ ಸ್ಥಾನದಲ್ಲಿದೆ.

ಬಿಎಸ್‌ಇ ವಿದ್ಯುತ್, ರಿಯಾಲ್ಟಿ, ಉಪಯುಕ್ತತೆಗಳು, ತೈಲ ಮತ್ತು ಅನಿಲ, ಹಣಕಾಸು ಮತ್ತು ಬ್ಯಾಂಕೆಕ್ಸ್ ಷೇರುಗಳು ಶೇಕಡಾ 2.55 ರಷ್ಟು ಏರಿಕೆ ಕಂಡವು. ಆದರೆ, ಆಟೋ, ಐಟಿ ಮತ್ತು ಟೆಕ್ ಷೇರುಗಳು ಇಳಿಕೆ ಕಂಡು ನಿರಾಸೆ ಅನುಭವಿಸಿದವು.

ABOUT THE AUTHOR

...view details