ಭಾಗಲ್ಪುರ (ಬಿಹಾರ) : ಇದು 10 ಜೂನ್ 1986 ರ ರಾತ್ರಿ ಸಂಭವಿಸಿದ ಘಟನೆ. ಬೇಗುಸರಾಯ್ ಜಿಲ್ಲೆಯಲ್ಲಿ ಅಧಿಕಾರಿಗಳು ಸೇರಿದಂತೆ ಐವರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಎಸ್ಪಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಪಡೆದ ಎಸ್‌ಪಿ ಸ್ಥಳಕ್ಕೆ ಆಗಮಿಸಿದಾಗ ಅಕ್ರಮವಾಗಿ ಎರಡು ರೂಪಾಯಿ ವಸೂಲಿ ಮಾಡುತ್ತಿದ್ದ ಕಾನ್ಸ್ಟೇಬಲ್ಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಭಾಗಲ್ಪುರ ನ್ಯಾಯಾಲಯ ಬರೋಬ್ಬರಿ 37 ವರ್ಷಗಳ ನಂತರ ಕೇಸ್ ಖುಲಾಸೆಗೊಳಿಸಿದೆ.
37 ವರ್ಷಗಳ ಬಳಿಕ ಬಿಡುಗಡೆ :ಘಟನೆ ಬಳಿಕ ಎಲ್ಲ ಪೊಲೀಸರ ವಿರುದ್ಧ ಮುಫಸ್ಸಿಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಷಯ ಕೆಳ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದಾದ ಬಳಿಕ ಹಲವು ಬಾರಿ ವಿಚಾರಣೆ ನಡೆದು 37 ವರ್ಷಗಳ ಬಳಿಕ ಐವರು ಪೊಲೀಸರನ್ನು ಬಿಡುಗಡೆಗೊಳಿಸಲಾಗಿದೆ. ರಾಮ್ ರತನ್ ಶರ್ಮಾ, ಕೈಲಾಶ್ ಶರ್ಮಾ, ಜ್ಞಾನಿ ಶಂಕರ್, ಯುಗೇಶ್ವರ್ ಮಹ್ತೋ ಮತ್ತು ರಾಮ್ ಬಾಲಕ್ ರಾಯ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಇದನ್ನೂ ಓದಿ :ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಾಕ್ಷಿ ನಾಶಕ್ಕಾಗಿ 4,500 ರೂಪಾಯಿ ನೋಟುಗಳನ್ನೇ ನುಂಗಿದ ಚಾಲಾಕಿ ಅಧಿಕಾರಿ !
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಭಾಗಲ್ಪುರದ ವಿಜಿಲೆನ್ಸ್ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಲ್ಲರನ್ನು ಕೇಸ್ನಿಂದ ಖುಲಾಸೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಾಸಿಕ್ಯೂಷನ್ ಕಡೆಯಿಂದ ನ್ಯಾಯಾಲಯಕ್ಕೆ ಆರೋಪಿಗಳು ಭಾಗಿಯಾಗಿರುವುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಎಲ್ಲರನ್ನೂ ಖುಲಾಸೆಗೊಳಿಸಿದೆ.