ಕರ್ನಾಟಕ

karnataka

ETV Bharat / bharat

ಭಿಕ್ಷುಕರಿಬ್ಬರ ನಡುವೆ ಮಾರಾಮಾರಿ: ಓರ್ವನ ಬರ್ಬರ ಕೊಲೆ - ಮುಖ್ಯ ಬಸ್ ನಿಲ್ದಾಣ

ರಸ್ತೆಯಲ್ಲಿಯೇ ಇಬ್ಬರು ಭಿಕ್ಷುಕರು ಬಡಿದಾಡಿಕೊಂಡು ಓರ್ವ ಸಾವನ್ನಪ್ಪಿರುವ ಘಟನೆ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. ದೊಣ್ಣೆಯಿಂದ ಭಿಕ್ಷುಕನ ತಲೆಗೆ ಇನ್ನೋರ್ವ ಮನಬಂದಂತೆ ಥಳಿಸಿದ್ದು, ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

beggar-beaten-to-death-over-verbal-spat-in-kanyakumari
ಭಿಕ್ಷುಕರಿಬ್ಬರ ನಡುವೆ ಮಾರಾಮಾರಿ

By

Published : Dec 2, 2020, 7:05 AM IST

ಕನ್ಯಾಕುಮಾರಿ (ತಮಿಳುನಾಡು): ಜಿಲ್ಲೆಯ ವೇದಾಚೇರಿ ನಗರದಲ್ಲಿ ವೃದ್ಧ ಭಿಕ್ಷುಕನೋರ್ವನನ್ನು ಇನ್ನೋರ್ವ ಭಿಕ್ಷುಕ ಥಳಿಸಿ ಕೊಲೆ ಮಾಡಿದ್ದಾನೆ.

ವೇದಾಚೇರಿಯ ಮುಖ್ಯ ಬಸ್ ನಿಲ್ದಾಣದ ಬಳಿ ಇಬ್ಬರು ಪ್ರತಿನಿತ್ಯ ಭಿಕ್ಷೆ ಬೇಡುತ್ತಿದ್ದರು. ಆದರೆ ಮಂಗಳವಾರ ಇವರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಅಲ್ಲದೆ ಇಬ್ಬರು ಕೈಕೈ ಮಿಲಾಯಿಸಿದ್ದರು. ಈ ಗಲಾಟೆ ತಾರಕಕ್ಕೇರಿದ್ದು, ಓರ್ವ ತನ್ನ ಬಳಿ ಇದ್ದ ದೊಣ್ಣೆಯಿಂದ ಮತ್ತೋರ್ವನ ತಲೆಗೆ ಹೊಡೆದಿದ್ದಾನೆ. ತಲೆಗೆ ತೀವ್ರ ಗಾಯಗೊಂಡು ರಸ್ತೆ ಮೇಲೆ ಬಿದ್ದ ಭಿಕ್ಷುಕನಿಗೆ ಮನಬಂದಂತೆ ಮತ್ತೆ ದೊಣ್ಣೆಯಿಂದ ಹೊಡೆದಿದ್ದಾನೆ. ಇದರಿಂದ ವೃದ್ಧ ಭಿಕ್ಷುಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿ ಭಿಕ್ಷುಕನನ್ನು ವಶಕ್ಕೆ ಪಡೆದು, ವಿಚಾರಣೆ ಮುಂದುವರಿಸಿದ್ದಾರೆ.

ABOUT THE AUTHOR

...view details