ಕಿನ್ನೌರ್ (ಹಿಮಾಚಲ ಪ್ರದೇಶ): ಜಿಲ್ಲೆಯ ಬಟ್ಸೆರಿ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಭೂಕುಸಿತದಿಂದಾಗಿ ಪರ್ವತಗಳಿಂದ ಕಲ್ಲುಗಳು ಉರುಳಿ ಬಿದ್ದ ಪರಿಣಾಮ ಒಂಬತ್ತು ಜನರು ಸಾವನ್ನಪ್ಪಿದ್ದು, ಮೂವರು ಸಾವು - ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸಾವನ್ನಪ್ಪಿದವರಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪ ಶರ್ಮಾ ಕೂಡ ಒಬ್ಬರು.
ಡಾ. ದೀಪಾ ಶರ್ಮಾ ಅವರು ಜುಲೈ 25ರ ಮಧ್ಯಾಹ್ನ 12.59ಕ್ಕೆ ಟ್ವಿಟರ್ನಲ್ಲಿ ತಮ್ಮ ಕೊನೆಯ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವನು ಐಟಿಬಿಪಿ ಚೆಕ್ - ಪೋಸ್ಟ್ ಹತ್ತಿರದ ಬೋರ್ಡ್ ಬಳಿ ನಿಂತಿದ್ದಾರೆ. 'ನಾನು ಭಾರತದ ಕೊನೆಯ ಹಂತದಲ್ಲಿ ನಿಂತಿದ್ದೇನೆ. ಇಲ್ಲಿಂದ ಸುಮಾರು 80 ಕಿ.ಮೀ ದೂರದಲ್ಲಿ ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಟಿಬೆಟ್‌ನ ಗಡಿಯಾಗಿದೆ.' ಎಂದು ಅವರು ಅವರು ಈ ಫೋಟೋದೊಂದಿಗೆ ಬರೆದಿದ್ದಾರೆ.