ಬೀಡ್(ಮಹಾರಾಷ್ಟ್ರ):ಇಲ್ಲಿನ ಬಿಜೆಪಿ ಅಧ್ಯಕ್ಷ ಭಾಗೀರಥ್ ಬಿಯಾನಿ (47) ಇಂದು ಮಧ್ಯಾಹ್ನ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೀಡು ಜಿಲ್ಲೆಯ ಎಂಐಡಿಸಿ ಪ್ರದೇಶದಲ್ಲಿ ತಮ್ಮ ನಿವಾಸದ ಮಲಗುವ ಕೋಣೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಗುಂಡು ಹಾರಿಸಿಕೊಂಡು ಆತ್ಮಹತ್ಯೆ: ಸಾವಿಗೆ ಕಾರಣ? - ಈಟಿವಿ ಭಾರತ ಕನ್ನಡ
ಮಹಾರಾಷ್ಟ್ರದ ಬೀಡು ಜಿಲ್ಲೆಯ ಬಿಜೆಪಿ ಅಧ್ಯಕ್ಷ ಭಾಗೀರಥ್ ಬಿಯಾನಿ ಇಂದು ಮಧ್ಯಾಹ್ನ ತಮ್ಮ ಮಲಗುವ ಕೋಣೆಯಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಜೆಪಿ ಅಧ್ಯಕ್ಷ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಮಾಹಿತಿ ತಿಳಿದ ಕೂಡಲೇ ಸಂಬಂಧಿಕರು ಬೀಡುವಿನ ಫೀನಿಕ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ನಂದಕುಮಾರ್ ಠಾಕೂರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಲಾಂಜೇವರ್, ಉಪಾಧೀಕ್ಷಕ ಸಂತೋಷ್ ವಾಲ್ಕೆ ಹಾಗೂ ಸ್ಥಳೀಯ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಸತೀಶ್ ವಾಘ್ ಅವರು ಆಸ್ಪತ್ರೆಗೆ ಧಾವಿಸಿದರು.
ಇದನ್ನೂ ಓದಿ :ನಿಲ್ಲದ ಕ್ರೌರ್ಯ.. ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ