ಉತ್ತರ ಪ್ರದೇಶ: ಕೊರೊನಾ ಲಾಕ್ಡೌನ್ನಿಂದ ವಾಹನ ಸಂಚಾರ ಹಾಗೂ ಕಾರ್ಖಾನೆಗಳ ಕಾರ್ಯಾಚರಣೆ ಬ್ರೇಕ್ ಬಿದ್ದಿದೆ. ಈ ನಡುವೆ ಸಹರಾನ್ಪುರದಿಂದ ಹಿಮಾಲಯದ ದರ್ಶನವಾಗುತ್ತಿದೆ.
ಹಿಮದಿಂದ ಆವೃತವಾದ ಪರ್ವತ ಶ್ರೇಣಿಯ ನೈಸರ್ಗಿಕ, ಅಲೌಕಿಕ, ಅದ್ಭುತ ದೃಶ್ಯವನ್ನು ಸ್ಥಳೀಯರು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಏಪ್ರಿಲ್ 29 ಮತ್ತು 30 ರಂದು ಇಂತಹ ದೃಶ್ಯ ಕಂಡು ಬಂದಿತ್ತು.