ಪರಲಖೆಮುಂಡಿ (ಗಜಪತಿ, ಒಡಿಶಾ): ಒಡಿಶಾದ ಗಜಪತಿ ಜಿಲ್ಲೆಯ ಅಡವಾ ಪೊಲೀಸ್ ಠಾಣೆಗೆ ಸ್ಥಳೀಯರು ನುಗ್ಗಿ ಪೊಲೀಸರಿಗೆ ಥಳಿಸಿದ ಕಾರಣ ಸ್ಥಳದಲ್ಲಿ ಭಾರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಗಾಂಜಾ ಕಳ್ಳಸಾಗಣೆ ಪ್ರಕರಣದಲ್ಲಿ ಗ್ರಾಮಸ್ಥನ ಬಂಧನವನ್ನು ವಿರೋಧಿಸಿ ಸ್ಥಳೀಯರು ಇಂದು ಬೆಳಗ್ಗೆ ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದರು. ನಿನ್ನೆ ರಾತ್ರಿ ಜಾರನ್‌ಪುರ ಗ್ರಾಮದ ನಿವಾಸಿಯಾಗಿರುವ ಆರೋಪಿಯನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಆದರೆ, ಆತನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡಲೇ ಆರೋಪಿ ಬಿಡುಗಡೆ ಮಾಡಿ ಪ್ರಕರಣ ಹಿಂಪಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.