ಬೆಗುಸರಾಯ್ (ಬಿಹಾರ):ಯಾರು ನಿಮ್ಮ ಸಮಸ್ಯೆಗಳನ್ನು ಕೇಳಿಸಿಕೊಳ್ಳುವುದಿಲ್ಲವೋ ಅಂಥಹ ಅಧಿಕಾರಿಗಳನ್ನು ಬಿದಿರಿನ ಬೆತ್ತಗಳಿಂದ ಹೊಡೆಯಿರಿ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಖೋದವಾಂಡ್ಪುರ ಎಂಬಲ್ಲಿ ಕೃಷಿ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಂಪಿ, ಎಂಎಲ್ಎ, ಗ್ರಾಮ ಪಂಚಾಯಿತಿ ಮುಖ್ಯಸ್ಥರು, ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು, ಎಸ್ಡಿಎಂಗಳು ಇರುವುದು ಜನರ ಸೇವೆಗಾಗಿ. ಅವರು ನಿಮ್ಮ ಮಾತನ್ನು ಕೇಳದಿದ್ದರೇ ಬಿದಿರಿನ ಬೆತ್ತದಿಂದ ಹೊಡೆಯಿರಿ, ತಲೆ ಪುಡಿಯಾಗುವ ಹಾಗೆ ಎರಡೂ ಕೈಗಳಿಂದ ಗುದ್ದಿ ಎಂದು ನೆರೆದಿದ್ದ ಜನರಿಗೆ ಹೇಳಿದರು.