ಕರ್ನಾಟಕ

karnataka

ETV Bharat / bharat

6 ತಿಂಗಳ ಹಿಂದೆ ಅಪಹರಣಕ್ಕೊಳಗಾದ ಬಾಲಕನನ್ನು ರಕ್ಷಿಸಿದ ಬಿಯಾಸ್​ ಪೊಲೀಸರು

ಕರ್ತಾರಪುರ ಗ್ರಾಮದ 13 ವರ್ಷದ ಬಾಲಕನನ್ನು 6 ತಿಂಗಳುಗಳ ಹಿಂದೆ ಅಪಹರಣ ಮಾಡಲಾಗಿತ್ತು. ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದು ಸುರಕ್ಷಿತವಾಗಿ ಅವರ ಪೋಷಕರಿಗ ಹಸ್ತಾಂತರಿಸಿದ್ದಾರೆ.

ಅಪಹರಣಕ್ಕೊಳಗಾದ ಬಾಲಕನ  ರಕ್ಷಣೆ
ಅಪಹರಣಕ್ಕೊಳಗಾದ ಬಾಲಕನ ರಕ್ಷಣೆ

By

Published : Jun 17, 2022, 12:38 PM IST

ಅಮೃತಸರ(ಪಂಜಾಬ್​):ಇಲ್ಲಿನ ಕರ್ತಾರ್​ಪುರ ಗ್ರಾಮದ 13 ವರ್ಷದ ಬಾಲಕನನ್ನು 6 ತಿಂಗಳುಗಳ ಹಿಂದೆ ಅಪಹರಣ ಮಾಡಲಾಗಿತ್ತು. ಇದೀಗ ಬಾಲಕನನ್ನು ಬಿಯಾಸ್​ ಠಾಣಾ ಪೊಲೀಸರು ರಕ್ಷಿಸಿದ್ದು, ಪೋಷಕರಿಗೆ ಹಸ್ತಾಂತರಿಸಿದ್ದಾರೆ.

ಜಿಲ್ಲೆಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಯಾಸ್ ಪ್ರದೇಶದ ಕರ್ತಾರ್‌ಪುರ ಗ್ರಾಮದಿಂದ ಸುಮಾರು 6 ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ 13 ವರ್ಷದ ಅಪ್ರಾಪ್ತ ಬಾಲಕನನ್ನು ಜಲಂಧರ್‌ನ ಬಿಯಾಸ್ ಪೊಲೀಸರ ನಿರಂತರ ಕಾರ್ಯಾಚರಣೆಯಿಂದ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂತರ ಪೊಲೀಸರು ಮಗುವನ್ನು ಸುರಕ್ಷಿತ ಪೋಷಕರಿಗೆ ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಮಗುವಿನ ತಾಯಿ ಕುಲದೀಪ್ ಕೌರ್ ಮತ್ತು ತಂದೆ ಲಖ್ವಿಂದರ್ ಸಿಂಗ್ ಬಿಯಾಸ್ ಪೊಲೀಸರು ತಮ್ಮ ಮಗು ವನಸ್ರೂಪ್​ನನ್ನು ಹುಡುಕಲು ನಿರಂತರ ಶ್ರಮಿಸಿದ್ದಾರೆ ಅವರಿಗೆ ಕೃತಜ್ಞತೆ ತಿಳಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಅಪಹರಣದ ಕುರಿತ ಬಾಲಕನ ತಾಯಿ ಕುಲದೀಪ್ ಕೌರ್ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಡಿಸೆಂಬರ್ 24, 2021 ನನ್ನ ಮೊಮ್ಮಗ ಆರೋಪಿ ಸುಖ್ವಿಂದರ್ ಸಿಂಗ್ ಮತ್ತು ಇನ್ನೊಬ್ಬ ಸಹಚರನೊಂದಿಗೆ ನನ್ನ ಮಗ ವನಸ್ರೂಪ್ ಅನ್ನು ಕರ್ತಾರ್‌ಪುರ ಗ್ರಾಮದಿಂದ ಅಪಹರಿಸಿ ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಜೂನ್ 15 ರಂದು ಅಪಹರಣಕ್ಕೊಳಗಾದ ಬಾಲಕ ಜಲಂಧರ್ ನಗರದ ಧಾಬಾದಲ್ಲಿ ಇದ್ದಾನೆ ಎಂಬ ಮಾಹಿತಿ ಮೇರೆಗೆ ಅವನನ್ನು ರಕ್ಷಿಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಮುಖ್ತಿಯಾರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:ಅಗ್ನಿಪಥ ಯೋಜನೆಗೆ ವಿರೋಧ: ಬಿಹಾರ,ಯುಪಿ,ತೆಲಂಗಾಣದಲ್ಲಿ ಭುಗಿಲೆದ್ದ ಆಕ್ರೋಶ, ರೈಲುಗಳಿಗೆ ಬೆಂಕಿ

For All Latest Updates

ABOUT THE AUTHOR

...view details