ಶ್ರೀಕಾಕುಳಂ (ಆಂಧ್ರಪ್ರದೇಶ): ಜಿಲ್ಲೆಯ ವಜ್ರಪುಕೊತ್ತೂರು ವಲಯದ ಕಿಡಿಸಿಂಗಿ ಗ್ರಾಮದಲ್ಲಿ ಕರಡಿಯೊಂದು 8 ಜನರು ಹಾಗೂ 10 ಹಸುಗಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಜನರ ಕಣ್ಣು, ಕಿವಿ, ಮುಖದ ಮೇಲೆ ಗಾಯಗಳಾಗಿದ್ದು, ಪಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಧ್ರದಲ್ಲಿ ಜನ, ಜಾನುವಾರುಗಳ ಮೇಲೆ ಕರಡಿ ದಾಳಿ - ಆಂಧ್ರದಲ್ಲಿ ಜನರ ಮೇಲೆ ಕರಡಿಯ ಭೀಕರ ದಾಳಿ
ಕರಡಿಯೊಂದು ಎಂಟು ಜನರು ಹಾಗೂ ಹತ್ತು ಹಸುಗಳ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.
ಆಂಧ್ರದಲ್ಲಿ ಭೀಕರ ಘಟನೆ: 8 ಜನ 10 ಜಾನುವಾರುಗಳ ಮೇಲೆ ಕರಡಿಯ ಭಯಾನಕ ದಾಳಿ
ನಿನ್ನೆ ಇದೇ ಭಾಗದಲ್ಲಿ ಕರಡಿ ದಾಳಿಗೆ ಕೋದಂಡರಾವ್ ಎಂಬ ವೃದ್ಧ ಮೃತಪಟ್ಟಿದ್ದರು. ಬೆಳಗ್ಗೆ ತೋಟಕ್ಕೆ ಹೋಗುತ್ತಿದ್ದಾಗ ಪೊದೆಯಲ್ಲಿದ್ದ ಕರಡಿ ಏಕಾಏಕಿ ಇವರ ಮೇಲೆ ದಾಳಿ ಮಾಡಿತ್ತು. ಈ ರೀತಿಯ ನಿರಂತರ ಘಟನೆಗಳಿಂದ ಜನರು ಭಯಭೀತರಾಗಿದ್ದಾರೆ.
ಇದನ್ನೂ ಓದಿ: ನಾಲ್ಕು ದಿನಗಳಲ್ಲಿ ಮತ್ತೊಂದು ಘಟನೆ.. ಮನೆಯ ನೀರಿನ ಟ್ಯಾಂಕ್ಗೆ ಹಾರಿ ಪ್ರಾಣಬಿಟ್ಟ ತಾಯಿ -ಮಕ್ಕಳು!
Last Updated : Jun 20, 2022, 4:31 PM IST