ಪೌರಿ (ಉತ್ತರಾಖಂಡ): ಉತ್ತರಾಖಂಡದ ಪೌರಿ ಕೋಟ್‌ದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಆಗ್ರೋಡಾ ಕಸ್ಬಾ ಪ್ರದೇಶದಲ್ಲಿ ಇತ್ತೀಚೆಗೆ ಕರಡಿಗಳ ಹಾವಳಿ ಹೆಚ್ಚಾಗಿದೆ. ನಸುಕಿನಲ್ಲಿ ಮಾಂಸದಂಗಡಿಗಳ ಮೇಲೆ ಕರಡಿಗಳು ದಾಳಿ ಮಾಡುತ್ತಿವೆ.
ಮಂಗಳವಾರ ಕೂಡ ಮಾಂಸದಂಗಡಿಯೊಂದರಲ್ಲಿ ಕರಡಿಗಳು ದಾಳಿ ಮಾಡಿ ಕೋಳಿ ಮತ್ತು ಕುರಿ ಮಾಂಸವನ್ನು ತಿಂದು ಹಾಕಿವೆ. ಕರಡಿಗಳ ಹಾವಳಿ ಬಗ್ಗೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.